ADVERTISEMENT

ಏಪ್ರಿಲ್‌ನಿಂದ ಪೆಟ್ರೋಲ್‌, ಡೀಸೆಲ್ ದುಬಾರಿ

ಪಿಟಿಐ
Published 28 ಫೆಬ್ರುವರಿ 2020, 19:45 IST
Last Updated 28 ಫೆಬ್ರುವರಿ 2020, 19:45 IST

ಮುಂಬೈ : ಕಡಿಮೆ ಮಾಲಿನ್ಯಕಾರಕ ಬಿಎಸ್‌–6 ಇಂಧನಗಳ ಬಳಕೆಯು ಏಪ್ರಿಲ್‌ 1ರಿಂದ ಜಾರಿಗೆ ಬರುತ್ತಿದ್ದಂತೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಕೆಲಮಟ್ಟಿಗೆ ಏರಿಕೆಯಾಗಲಿದೆ.

‘ಇಡೀ ದೇಶದಾದ್ಯಂತ ಹೆಚ್ಚು ಶುದ್ಧತೆಯ ಇಂಧನಗಳ ಬಳಕೆಯು ಜಾರಿಗೆ ಬರುತ್ತಿದ್ದಂತೆ ಬೆಲೆಯಲ್ಲಿ ಏರಿಕೆ ಕಂಡುಬರಲಿದೆ’ ಎಂದು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಅಧ್ಯಕ್ಷ ಸಂಜೀವ್‌ ಸಿಂಗ್‌ ಹೇಳಿದ್ದಾರೆ. ಬೆಲೆ ಹೆಚ್ಚಳದ ಮಟ್ಟ ಎಷ್ಟು ಇರಲಿದೆ ಎನ್ನುವುದರ ಬಗ್ಗೆ ಅವರು ವಿವರ ನೀಡಲಿಲ್ಲ.

‘ಬೆಲೆಗಳು ಗಮನಾರ್ಹವಾಗಿ ಹೆಚ್ಚಳಗೊಂಡು ಬಳಕೆದಾರರಿಗೆ ಖಂಡಿತವಾಗಿಯೂ ಹೊರೆಯಾಗುವುದಿಲ್ಲ’ ಎಂದು ಅವರು ಭರವಸೆ ನೀಡಿದ್ದಾರೆ.

ADVERTISEMENT

‘ತೈಲಾಗಾರಗಳನ್ನು ಮೇಲ್ದರ್ಜೆಗೆ ಏರಿಸಲು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ₹ 35 ಸಾವಿರ ಕೋಟಿ ಮೊತ್ತದ ಬಂಡವಾಳ ಹೂಡಿಕೆ ಮಾಡಿವೆ. ‘ಐಒಸಿ’ಯು ₹ 17 ಸಾವಿರ ತೊಡಗಿಸಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.