ADVERTISEMENT

ಎರಡನೇ ದಿನವೂ ಪೆಟ್ರೋಲ್‌ ದರ ಏರಿಕೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 15:46 IST
Last Updated 17 ಆಗಸ್ಟ್ 2020, 15:46 IST
ಪೆಟ್ರೋಲ್
ಪೆಟ್ರೋಲ್   

ಬೆಂಗಳೂರು: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಸತತ ಎರಡನೇ ದಿನವೂ ಪೆಟ್ರೋಲ್‌ ದರ ಏರಿಕೆ ಮಾಡಿವೆ. 48 ದಿನಗಳವರೆಗೆ ಪೆಟ್ರೋಲ್‌ ದರದಲ್ಲಿ ಬದಲಾವಣೆ ಮಾಡದಿದ್ದ ಕಂಪನಿಗಳು ಭಾನುವಾರದಿಂದ ಪೈಸೆಗಳ ಲೆಕ್ಕದಲ್ಲಿ ಪೆಟ್ರೋಲ್‌ ದರ ಹೆಚ್ಚಿಸುತ್ತಿವೆ.

ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ ಭಾನುವಾರ 12 ಪೈಸೆ ಹೆಚ್ಚಾಗಿತ್ತು. ಸೋಮವಾರ 15 ಪೈಸೆ ಹೆಚ್ಚಿಸಲಾಗಿದೆ. ಸೋಮವಾರ ಒಂದು ಲೀಟರ್‌ ಪೆಟ್ರೋಲ್‌ ₹ 83.38ರಂತೆ ಮಾರಾಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT