ಬೆಂಗಳೂರು: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇಇವೆ.
ಸರ್ಕರಿ ಸ್ವಾಮ್ಯದ ತೈಲ ಕಂಪನಿಗಳು ಜನವರಿ 10ರಿಂದ ನಿರಂತರವಾಗಿ ಇಂಧನ ದರ ಹೆಚ್ಚಿಸುತ್ತಲೇ ಇವೆ.
ಜ.10ರಿಂದ ಮಂಗಳವಾರದವರೆಗೆ ಪೆಟ್ರೋಲ್ ದರ ಲೀಟರಿಗೆ ₹ 1.59 ಹಾಗೂ ಡೀಸೆಲ್ ದರ ₹ 2.01ರಷ್ಟು ಹೆಚ್ಚಾಗಿದೆ.
ಮಂಗಳವಾರ ಪ್ರತಿ ಲೀಟರ್ಪೆಟ್ರೋಲ್ ದರ 29 ಪೈಸೆ ಹೆಚ್ಚಾಗಿ ₹72.73 ಮತ್ತು ಡೀಸೆಲ್ 30 ಪೈಸೆ ಹೆಚ್ಚಾಗಿ ₹66.59ಕ್ಕೆ ಏರಿಕೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.