ADVERTISEMENT

ರಫ್ತಿನ ದೀರ್ಘಾವಧಿ ಗುರಿ ನಿಗದಿಪಡಿಸಿ: ಪ್ರಧಾನಿ ಮೋದಿ

ಪಿಟಿಐ
Published 23 ಜೂನ್ 2022, 15:59 IST
Last Updated 23 ಜೂನ್ 2022, 15:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಫ್ತು ವಹಿವಾಟಿಗೆ ಸಂಬಂಧಿಸಿದಂತೆ ದೀರ್ಘಾವಧಿ ಗುರಿಗಳನ್ನು ಹಾಕಿಕೊಳ್ಳುವಂತೆ ಹಾಗೂ ಅವುಗಳನ್ನು ಸಾಧಿಸಲು ಇರುವ ಮಾರ್ಗಗಳ ಕುರಿತು ಸರ್ಕಾರಕ್ಕೆ ಸಲಹೆ ನೀಡುವಂತೆ ರಫ್ತುದಾರರು ಮತ್ತು ಉದ್ಯಮ ವಲಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೋರಿದ್ದಾರೆ.

ವಾಣಿಜ್ಯ ಭವನವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದ ಅವರು, ದೇಶವನ್ನು ಅಭಿವೃದ್ಧಿ ಹೊಂದುತ್ತಿರುವ ಸ್ಥಾನದಿಂದ ಅಭಿವೃದ್ಧಿ ಹೊಂದಿದ ಸ್ಥಾನದೆಡೆಗೆ ಕರೆದೊಯ್ಯುವಲ್ಲಿ ರಫ್ತು ವಹಿವಾಟು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ.

ಹಿಂದಿನ ಹಣಕಾಸು ವರ್ಷದಲ್ಲಿ ಜಾಗತಿಕ ಮಟ್ಟದಲ್ಲಿ ಅಡಚಣೆಗಳ ಹೊರತಾಗಿಯೂ ಭಾರತದ ಸರಕು ಮತ್ತು ಸೇವೆಗಳ ರಫ್ತು ವಹಿವಾಟು ಮೌಲ್ಯವು ₹ 50 ಲಕ್ಷ ಕೋಟಿಗೆ ತಲುಪಿದೆ ಎಂದು ಮೋದಿ ತಿಳಿಸಿದ್ದಾರೆ.

ADVERTISEMENT

ಸರಕುಗಳ ರಫ್ತು ಮೌಲ್ಯ
₹ 31 ಲಕ್ಷ ಕೋಟಿ:
2021–22
₹ 30 ಲಕ್ಷ ಕೋಟಿ:2020–21

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.