ADVERTISEMENT

ಪಿಎನ್‌ಬಿ ಲಾಭ ಶೇ 13ರಷ್ಟು ಹೆಚ್ಚಳ

ಪಿಟಿಐ
Published 19 ಜನವರಿ 2026, 13:32 IST
Last Updated 19 ಜನವರಿ 2026, 13:32 IST
ಪಿಎನ್‌ಬಿ
ಪಿಎನ್‌ಬಿ   

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ (ಪಿಎನ್‌ಬಿ) ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ ಕಂಡಿದೆ.

ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ಬ್ಯಾಂಕ್‌ ₹4,508 ಕೋಟಿ ಲಾಭ ಗಳಿಸಿತ್ತು. ಅದು ಈ ಬಾರಿ ₹5,100 ಕೋಟಿಗೆ ಹೆಚ್ಚಳವಾಗಿದೆ. ವಸೂಲಾಗದ ಸಾಲದ ಪ್ರಮಾಣ ಕಡಿಮೆ ಆಗಿದೆ ಎಂದು ಬ್ಯಾಂಕ್ ಷೇರುಪೇಟೆಗೆ ಸೋಮವಾರ ತಿಳಿಸಿದೆ.

ಬ್ಯಾಂಕ್‌ನ ಒಟ್ಟು ವರಮಾನವು ₹34,752 ಕೋಟಿಯಿಂದ ₹37,253 ಕೋಟಿಗೆ ಹೆಚ್ಚಳವಾಗಿದೆ. ಬಡ್ಡಿ ವರಮಾನವು ₹32,231 ಕೋಟಿಯಷ್ಟಾಗಿದೆ. ಒಟ್ಟು ವಸೂಲಾಗದ ಸಾಲದ ಪ್ರಮಾಣ (ಜಿಎನ್‌ಪಿಎ) ಶೇ 4.09ರಿಂದ ಶೇ 3.19ಕ್ಕೆ ಇಳಿದಿದೆ. ನಿವ್ವಳ ಎನ್‌ಪಿಎ ಶೇ 0.41ರಿಂದ ಶೇ 0.32ಕ್ಕೆ ಕಡಿಮೆ ಆಗಿದೆ. 

ADVERTISEMENT

ಪ್ರಾವಿಜನ್ ಕವರೇಜ್ ರೇಷಿಯೊ (ಪಿಸಿಆರ್) ಶೇ 96.99ರಷ್ಟಾಗಿದೆ. ಬ್ಯಾಂಕ್‌ನ ಒಟ್ಟು ವ್ಯವಹಾರ ಶೇ 9.5ರಷ್ಟು ಬೆಳವಣಿಗೆ ದಾಖಲಿಸಿದ್ದು, ₹28.91 ಲಕ್ಷ ಕೋಟಿಯಾಗಿದೆ. ಠೇವಣಿಯು ಶೇ 8.5ರಷ್ಟು ಏರಿಕೆಯಾಗಿದ್ದು, ₹16.60 ಲಕ್ಷ ಕೋಟಿಯಾಗಿದೆ. ಬ್ಯಾಂಕ್‌ನ ನೀಡಿದ ಸಾಲದ ಪ್ರಮಾಣದಲ್ಲಿ ಶೇ 10.9ರಷ್ಟು ಹೆಚ್ಚಳವಾಗಿದ್ದು, ₹12.31 ಲಕ್ಷ ಕೋಟಿಯಾಗಿದೆ. 

ಬ್ಯಾಂಕ್‌ನ ಬಂಡವಾಳ ಮೀಸಲು ಅನುಪಾತ (ಸಿಎಆರ್‌) ಶೇ 15.41ರಿಂದ ಶೇ 16.77ಕ್ಕೆ ಹೆಚ್ಚಳವಾಗಿದೆ ಎಂದು ಬ್ಯಾಂಕ್ ತಿಳಿಸಿದೆ. ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಬ್ಯಾಂಕ್‌ ₹11,679 ಕೋಟಿ ಲಾಭ ಗಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.