ADVERTISEMENT

ದೈತ್ಯ ರಿಟೇಲ್‌ ಮಳಿಗೆಗಳಲ್ಲಿ ಮುಂಜಾಗ್ರತಾ ಕ್ರಮ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 3:48 IST
Last Updated 27 ಮಾರ್ಚ್ 2020, 3:48 IST
ಅಂಗಡಿಗಳಲ್ಲಿ ಮುಂಜಾಗ್ರತಾ ಕ್ರಮ
ಅಂಗಡಿಗಳಲ್ಲಿ ಮುಂಜಾಗ್ರತಾ ಕ್ರಮ   
""

ನವದೆಹಲಿ (ಪಿಟಿಐ):ದೊಡ್ಡ ಪ್ರಮಾಣದಲ್ಲಿ ರಿಟೇಲ್‌ ವಹಿವಾಟು ನಡೆಸುವ ಕಂಪನಿಗಳು ಕೊರೊನಾ ವೈರಸ್‌ ಸೋಂಕು ಹರಡುವುದನ್ನು ತಡೆಯಲು ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿವೆ.

ಮಳಿಗೆಗಳಿಗೆ ಪ್ರವೇಶವನ್ನು ಮಿತಿಗೊಳಿಸಲಾಗಿದ್ದು, ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಮಾಡಲು ಗೆರೆಗಳನ್ನು ಎಳೆದು ಅದರಲ್ಲಿ ನಿಲ್ಲುವಂತೆ ಸೂಚನೆ ನೀಡಲಾಗುತ್ತಿದೆ.ರಿಲಯನ್ಸ್‌ ಫ್ರೆಷ್, ಮೋರ್‌, ವಾಲ್‌ಮಾರ್ಟ್‌ ಮತ್ತು ಮೆಟ್ರೊ ಕ್ಯಾಷ್‌ ಆ್ಯಂಡ್‌ ಕ್ಯಾರಿ ಮಳಿಗೆಗಳಲ್ಲಿ ಗ್ರಾಹಕರು ಮಳಿಗೆ ಪ್ರವೇಶಿಸುವುದಕ್ಕೂ ಮೊದಲು ದೇಹದ ತಾಪಮಾನವನ್ನೂ ಪರಿಶೀಲನೆ ಮಾಡಲಾಗುತ್ತಿದೆ.

ಎಲ್ಲಾ ಉತ್ಪನ್ನಗಳನ್ನು ಪ್ಯಾಕ್‌ ಮಾಡಲಾಗುತ್ತಿದೆ. ಜತೆಗೆ ಮೊಬೈಲ್‌ ಚೆಕ್‌ಔಟ್‌ ವ್ಯವಸ್ಥೆ ಕಲ್ಪಿಸಿ ಬಿಲ್ಲಿಂಗ್‌ ಸಮಯವನ್ನು ಕಡಿಮೆ ಮಾಡಲಾಗುತ್ತಿದೆ. ಜನರು ಒಂದೇ ಕಡೆ ಮುತ್ತಿಕೊಳ್ಳುವುದನ್ನೂ ತಡೆಯಲು ಟೋಕನ್‌ ವ್ಯವಸ್ಥೆಯನ್ನೂ ಪರಿಚಯಿಸಲಾಗಿದೆ ಎಂದು ಮೆಟ್ರೊ ಕ್ಯಾಷ್‌ ಆ್ಯಂಡ್‌ ಕ್ಯಾರಿ ತಿಳಿಸಿದೆ.

ADVERTISEMENT

ಫ್ಯೂಚರ್‌, ಡಿಮಾರ್ಟ್‌ ಮತ್ತು ವಾಲ್‌ಮಾರ್ಟ್‌ ಕಂಪನಿಗಳು ತಮ್ಮ ಮಳಿಗೆಗಳಲ್ಲಿ ಸ್ವಚ್ಛತೆಗೆ ಎಂದಿಗಿಂತಲೂ ಹೆಚ್ಚಿನ ಆದ್ಯತೆ ನೀಡುತ್ತಿವೆ.ಪ್ರತಿ ಗ್ರಾಹಕರ ಮಧ್ಯೆ ಕನಿಷ್ಠ ಮೂರು ಅಡಿ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಕಂಪನಿಗಳು ತಿಳಿಸಿವೆ.

ಕರೆನ್ಸಿ ನೋಟುಗಳ ಬಳಕೆಯನ್ನು ಆದಷ್ಟೂ ಕಡಿಮೆ ಮಾಡಲಾಗುತ್ತಿದ್ದು, ಡಿಜಿಟಲ್‌ ವಹಿವಾಟಿಗೆ ಆದ್ಯತೆ ನೀಡಲಾಗುತ್ತಿದೆ. ಗ್ರಾಹಕರಿಗೂ ಈ ಬಗ್ಗೆ ಮನವರಿಕೆ ಮಾಡಲಾಗುತ್ತಿದೆ ಎಂದು ಕಂಪನಿಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.