ADVERTISEMENT

ಕೋವಿಡ್‌ ವಿರುದ್ಧದ ಹೋರಾಟಕ್ಕೆ ಪ್ರೆಸ್ಟೀಜ್‌ ಫೌಂಡೇಷನ್ ನೆರವು

​ಪ್ರಜಾವಾಣಿ ವಾರ್ತೆ
Published 18 ಮೇ 2021, 15:12 IST
Last Updated 18 ಮೇ 2021, 15:12 IST

ಬೆಂಗಳೂರು: ಕೋವಿಡ್‌ ಪರಿಹಾರ ಕಾರ್ಯಕ್ರಮಗಳಿಗೆ ಇದುವರೆಗೆ ₹ 2 ಕೋಟಿಗೂ ಅಧಿಕ ಮೊತ್ತವನ್ನು ನೀಡಿರುವುದಾಗಿ ಪ್ರೆಸ್ಟೀಜ್‌ ಫೌಂಡೇಷನ್‌ ತಿಳಿಸಿದೆ.

ಎಲೆಕ್ಟ್ರಾನಿಕ್‌ ಸಿಟಿಯಲ್ಲಿನ ವಿಮಲಾಲಯ ಆಸ್ಪತ್ರೆಯಲ್ಲಿ 24 ಜನರಲ್‌ ವಾರ್ಡ್‌ ಬೆಡ್‌ಗಳು, ವೆಂಟಿಲೇಟರ್‌ಗಳು, ಆಮ್ಲಜನಕ ಟ್ಯಾಂಕ್‌, ಬೆಡ್ ಮಾನಿಟರ್ಸ್‌, 450 ಲೀಟರಿನ ದ್ರವೀಕೃತ ಆಮ್ಲಜನಕ ಸಿಲಿಂಡರ್, ಬೈಪಾಸ್‌ ಮಷಿನ್‌ಗಳು ಮತ್ತು ಇಂಜೆಕ್ಷನ್‌ ಪಂಪ್‌ಗಳ ಜೊತೆಗೆ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಗಳನ್ನು ನೀಡಲಾಗುತ್ತಿದೆ ಎಂದು ಕಂಪನಿ ಹೇಳಿದೆ.

ರೋಟರಿ ಬೆಂಗಳೂರು ಮಿಡ್‌ಟೌನ್‌ ಮೂಲಕ ಎಚ್‌ಬಿಎಸ್‌ ಆಸ್ಪತ್ರೆಯಲ್ಲಿ ಐಸಿಯು ಸೌಲಭ್ಯ ಇರುವ 24 ಬೆಡ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಕೊಡಗು ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ನಲ್ಲಿನ ರೋಗಿಗಳಿಗೆ ವೆಂಟಿಲೇಟರ್‌ ಮತ್ತು ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳನ್ನೂ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.