ADVERTISEMENT

₹ 1 ಲಕ್ಷ ಕೋಟಿ ದಾಟಿದ ಸರ್ಕಾರಿ ಬ್ಯಾಂಕ್‌ಗಳ ಲಾಭ

ಪಿಟಿಐ
Published 21 ಮೇ 2023, 15:54 IST
Last Updated 21 ಮೇ 2023, 15:54 IST

ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಒಟ್ಟು ಲಾಭವು 2022–23ನೆಯ ಹಣಕಾಸು ವರ್ಷದಲ್ಲಿ ₹1 ಲಕ್ಷ ಕೋಟಿಯನ್ನು ದಾಟಿದೆ. ಇದರಲ್ಲಿ ಸುಮಾರು ಅರ್ಧದಷ್ಟು ಪಾಲು ಎಸ್‌ಬಿಐನದ್ದೇ ಇದೆ. 2022–23ರಲ್ಲಿ ಎಸ್‌ಬಿಐ ಲಾಭ ₹ 50,232 ಕೋಟಿ ಆಗಿದೆ. 

2017–18ರಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಒಟ್ಟು ನಷ್ಟ ₹85,390 ಕೋಟಿ ಆಗಿತ್ತು. ಆ ಬಳಿಕ ಈಗ 2022–23ನೇ ಹಣಕಾಸು ವರ್ಷದಲ್ಲಿ ಈ ಬ್ಯಾಂಕ್‌ಗಳು ₹1.04 ಲಕ್ಷ ಕೋಟಿಯಷ್ಟು ಲಾಭ ಗಳಿಸಿವೆ. ಬ್ಯಾಂಕ್‌ಗಳು ಪ್ರಕಟಿಸಿರುವ ಹಣಕಾಸು ಫಲಿತಾಂಶದ ವಿಶ್ಲೇಷಣೆಯ ಆಧಾರದ ಮೇಲೆ ಈ ಮಾಹಿತಿ ನೀಡಲಾಗಿದೆ.

ಸರ್ಕಾರಿ ಸ್ವಾಮ್ಯದ 12 ಬ್ಯಾಂಕ್‌ಗಳ ಒಟ್ಟು ಲಾಭವು 2021–22ಕ್ಕೆ ಹೋಲಿಸಿದರೆ 2022–23ರಲ್ಲಿ ಶೇ 57ರಷ್ಟು ಏರಿಕೆ ಕಂಡಿದೆ. ಪಂಜಾಬ್‌ ನ್ಯಾಷನಲ್ ಬ್ಯಾಂಕ್ ಒಂದನ್ನು ಹೊರತುಪಡಿಸಿ ಉಳಿದೆಲ್ಲ ಬ್ಯಾಂಕ್‌ಗಳ ತೆರಿಗೆ ನಂತರದ ಲಾಭವು ಹೆಚ್ಚಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.