ADVERTISEMENT

ಬಜಾಜ್ ಆಟೊ: ನೀರಜ್ ಬಜಾಜ್ ಹೊಸ ಅಧ್ಯಕ್ಷ

ಪಿಟಿಐ
Published 30 ಏಪ್ರಿಲ್ 2021, 21:46 IST
Last Updated 30 ಏಪ್ರಿಲ್ 2021, 21:46 IST

ನವದೆಹಲಿ: ದೇಶದ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರು ಎಂಬ ಹೆಗ್ಗಳಿಕೆ ಹೊತ್ತಿರುವ ರಾಹುಲ್ ಬಜಾಜ್ ಅವರು ಬಜಾಜ್ ಆಟೊ ಕಂಪನಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮೇ 1ರಿಂದ ಅನ್ವಯ ಆಗುವಂತೆ ನೀರಜ್ ಬಜಾಜ್ ಅವರು ಕಂಪನಿಯ ಅಧ್ಯಕ್ಷರಾಗಲಿದ್ದಾರೆ ಎಂದು ಕಂಪನಿಯು ಷೇರು ಮಾರುಕಟ್ಟೆಗೆ ತಿಳಿಸಿದೆ. ರಾಹುಲ್ ಬಜಾಜ್ ಅವರು ಕಂಪನಿ ಗೌರವಾಧ್ಯಕ್ಷ ಸ್ಥಾನವನ್ನು ಮುಂದಿನ ಐದು ವರ್ಷಗಳ ಅವಧಿಗೆ ವಹಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT