ADVERTISEMENT

ರಾಜೀವ್‌ ಬನ್ಸಲ್‌ ಏರ್‌ ಇಂಡಿಯಾ ಮುಖ್ಯಸ್ಥ

ಪಿಟಿಐ
Published 13 ಫೆಬ್ರುವರಿ 2020, 17:17 IST
Last Updated 13 ಫೆಬ್ರುವರಿ 2020, 17:17 IST
ರಾಜೀವ್‌ ಬನ್ಸಲ್‌
ರಾಜೀವ್‌ ಬನ್ಸಲ್‌   

ನವದೆಹಲಿ: ಹಿರಿಯ ಅಧಿಕಾರಿ ರಾಜೀವ್‌ ಬನ್ಸಲ್‌ ಅವರನ್ನು ಏರ್‌ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

ಎರಡನೇ ಬಾರಿಗೆ ಅವರು ‘ಎಐ’ ಮುಖ್ಯಸ್ಥರಾಗಿದ್ದಾರೆ. 2017ರಲ್ಲಿ ಮೂರು ತಿಂಗಳ ಕಾಲ ತಾತ್ಕಾಲಿಕವಾಗಿ ಈ ಹುದ್ದೆ ನಿರ್ವಹಿಸಿದ್ದರು. ಈ ಹುದ್ದೆಯಲ್ಲಿದ್ದ ಅಶ್ವನಿ ಲೋಹನಿ ಅವರ ಅಧಿಕಾರಾವಧಿ ಗುರುವಾರ ಕೊನೆಗೊಂಡಿದೆ.

ಹಣಕಾಸು ಕಾರ್ಯದರ್ಶಿ: ಹಿರಿಯ ಐಎಎಸ್‌ ಅಧಿಕಾರಿ ದೇಬಶಿಷ್‌ ಪಾಂಡಾ ಅವರನ್ನು ಹೊಸ ಹಣಕಾಸು ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.