ADVERTISEMENT

ಕೋಟಕ್‌ ಮಹೀಂದ್ರ ಬ್ಯಾಂಕ್‌ಗೆ ದೀಪಕ್‌ ಗುಪ್ತ ನೇಮಕಕ್ಕೆ ಆರ್‌ಬಿಐ ಒಪ್ಪಿಗೆ

ಪಿಟಿಐ
Published 8 ಸೆಪ್ಟೆಂಬರ್ 2023, 13:55 IST
Last Updated 8 ಸೆಪ್ಟೆಂಬರ್ 2023, 13:55 IST
   

ನವದೆಹಲಿ: ಕೋಟಕ್ ಮಹೀಂದ್ರ ಬ್ಯಾಂಕ್‌ಗೆ ಮಧ್ಯಂತರ ಅವಧಿಗೆ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಆಗಿ ದೀಪಕ್ ಗುಪ್ತ ಅವರನ್ನು ನೇಮಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಒಪ್ಪಿಗೆ ನೀಡಿದೆ.

ಉದಯ್‌ ಕೋಟಕ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಈ ನೇಮಕ ನಡೆದಿದೆ.

ಗುಪ್ತ ಅವರ ನೇಮಕವು ಸೆಪ್ಟೆಂಬರ್ 2ರಿಂದ ಜಾರಿಗೆ ಬರುವಂತೆ ಎರಡು ತಿಂಗಳ ಅವಧಿಗೆ ಇರಲಿದೆ ಎಂದು ಆರ್‌ಬಿಐ ಗುರುವಾರ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ಕೋಟಕ್ ಮಹೀಂದ್ರ ಬ್ಯಾಂಕ್‌ ಷೇರುಪೇಟೆಗೆ ಮಾಹಿತಿ ನೀಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.