ADVERTISEMENT

ಲೆಕ್ಕಪರಿಶೋಧಕ ಕಂಪನಿ ‘ಹರಿಭಕ್ತಿ ಆ್ಯಂಡ್‌ ಕೊ’ಗೆ ಎರಡು ವರ್ಷ ನಿಷೇಧ: ಆರ್‌ಬಿಐ

ಪಿಟಿಐ
Published 12 ಅಕ್ಟೋಬರ್ 2021, 10:09 IST
Last Updated 12 ಅಕ್ಟೋಬರ್ 2021, 10:09 IST

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಲೆಕ್ಕಪತ್ರ ಪರಿಶೋಧಕ ಕಂಪನಿ ಹರಿಭಕ್ತಿ ಆ್ಯಂಡ್‌ ಕೊ ಎಲ್‌ಎಲ್‌ಪಿಗೆ 2022ರ ಏಪ್ರಿಲ್‌ 1ರಿಂದ ಎರಡು ವರ್ಷಗಳ ಅವಧಿಗೆ ಯಾವುದೇ ರೀತಿಯ ಲೆಕ್ಕಪತ್ರ ಪರಿಶೋಧನಾ ಕಾರ್ಯ ಕೈಗೊಳ್ಳದಂತೆ ನಿಷೇಧ ಹೇರಿದೆ.

ವ್ಯವಸ್ಥಿತವಾಗಿ ಪ್ರಮುಖವಾದ ಬ್ಯಾಂಕೇತರ ಹಣಕಾಸು ಕಂಪನಿಯ ಶಾಸನಬದ್ಧ ಲೆಕ್ಕಪರಿಶೋಧನೆಗೆ ಸಂಬಂಧಿಸಿದಂತೆ ಆರ್‌ಬಿಐ ನೀಡಿದ ನಿರ್ದಿಷ್ಟ ನಿರ್ದೇಶನವನ್ನು ಅನುಸರಿಸಲು ವಿಫಲವಾದ ಕಾರಣಕ್ಕಾಗಿ ಈ ಕ್ರಮ ಕೈಗೊಂಡಿರುವುದಾಗಿ ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಹಿಂದಿನ ಲೆಕ್ಕಪತ್ರ ಪರಿಶೋಧನೆಯ ಪ್ರಕಾರ, ಯಾವ ಎನ್‌ಬಿಎಫ್‌ಸಿಯ ಆಸ್ತಿ ಮೌಲ್ಯವು ₹ 500 ಕೋಟಿ ಅಥವಾ ಅದಕ್ಕಿಂತಲೂ ಹೆಚ್ಚು ಇರುತ್ತದೆಯೋ ಅಂತಹ ಎನ್‌ಬಿಎಫ್‌ಸಿಯನ್ನು ವ್ಯವಸ್ಥಿತವಾಗಿ ಪ್ರಮುಖ ಎನ್‌ಬಿಎಫ್‌ಸಿ ಎಂದು ಪರಿಗಣಿಸಲಾಗುತ್ತದೆ.

ಆರ್‌ಬಿಐ ಈ ರೀತಿಯ ಕ್ರಮ ಕೈಗೊಳ್ಳುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಆರ್‌ಬಿಐನ ಈ ಕ್ರಮದಿಂದಾಗಿ 2021–22ನೇ ಹಣಕಾಸು ವರ್ಷಕ್ಕೆ ಸಂಬಂಧಿಸದ ಲೆಕ್ಕಪತ್ರ ಪರಿಶೋಧನೆ ಮಾಡಲು ಕಂಪನಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.