ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿ ಸಭೆಯ ತೀರ್ಮಾನ ಶುಕ್ರವಾರ ಪ್ರಕಟವಾಗಲಿದ್ದು, ರೆಪೊ ದರದಲ್ಲಿ ಇಳಿಕೆ ಆಗುವ ನಿರೀಕ್ಷೆ ಇದೆ. ಇದು ಆದಲ್ಲಿ ಸಾಲದ ಮರುಪಾವತಿ ಕಂತುಗಳಲ್ಲಿ ತುಸು ಇಳಿಕೆ ಆಗುವ ಸಾಧ್ಯತೆ ಇದೆ.
ರೆಪೊ ದರದಲ್ಲಿ ಶೇಕಡ 0.25ರಷ್ಟು ಇಳಿಕೆ ಆಗಬಹುದು ಎಂಬುದು ತಜ್ಞರ ನಿರೀಕ್ಷೆ. ಇಳಿಕೆಯು ಶೇ 0.50ರಷ್ಟು ಕೂಡ ಆಗಬಹುದು ಎಂಬ ನಿರೀಕ್ಷೆಯೂ ಇದೆ.
ಹಣಕಾಸು ನೀತಿ ಸಮಿತಿಯ ಸಭೆಯು ಬುಧವಾರ ಆರಂಭವಾಗುತ್ತದೆ. ರೆಪೊ ದರವನ್ನು ಈ ವರ್ಷ ಎರಡು ಬಾರಿ ಇಳಿಕೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.