ADVERTISEMENT

ತಜ್ಞರ ಸಮಿತಿ ರಚಿಸಿದ ಆರ್‌ಬಿಐ

ಪಿಟಿಐ
Published 12 ಆಗಸ್ಟ್ 2024, 14:40 IST
Last Updated 12 ಆಗಸ್ಟ್ 2024, 14:40 IST
RBI
RBI   

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)  ಹಂಚಿಕೊಳ್ಳುವ ಅಂಕಿ–ಅಂಶವು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಆರ್‌ಬಿಐನ ಡೆಪ್ಯುಟಿ ಗವರ್ನರ್‌ ಮೈಕೆಲ್‌ ಪಾತ್ರಾ ನೇತೃತ್ವದಲ್ಲಿ ಸೋಮವಾರ ಸಮಿತಿಯನ್ನು ರಚಿಸಿದೆ.

10 ಸದಸ್ಯರ ತಜ್ಞರ ಸಮಿತಿಯು ಈ ವರ್ಷದ ನವೆಂಬರ್‌ ಅಂತ್ಯದೊಳಗೆ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ. ಪಾತ್ರಾ ಅಧ್ಯಕ್ಷತೆಯಲ್ಲಿನ ಸಮಿತಿಯು, ಅಂಕಿ– ಅಂಶಗಳ ಗುಣಮಟ್ಟವನ್ನು ಪರಿಶೀಲಿಸಲಿದ್ದು, ಸುಧಾರಣೆಗೆ ಸಲಹೆ ನೀಡಲಿದೆ.

ರಾಷ್ಟ್ರೀಯ ಸಾಂಖ್ಯಿಕ ಆಯೋಗದ ಮಾಜಿ ಅಧ್ಯಕ್ಷ ಆರ್.ಬಿ. ಬರ್ಮನ್‌, ರಾಷ್ಟ್ರೀಯ ಅನ್ವಯಿಕ ಆರ್ಥಿಕ ಸಂಶೋಧನಾ ಮಂಡಳಿಯ ಸೋನಾಲ್ಡೆ ದೇಸಾಯಿ, ಪುಣೆಯ ನ್ಯಾಷನಲ್‌ ಇನ್ಸಿಟ್ಯೂಟ್‌ ಆಫ್‌ ಬ್ಯಾಂಕ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕ ಪಾರ್ಥ ರೇ, ರಾಷ್ಟ್ರೀಯ ಸಾಂಖ್ಯಿಕ ಆಯೋಗದ ಮಾಜಿ ಅಧ್ಯಕ್ಷ ಬಿಮಲ್‌ ರಾಯ್‌, ಒಇಸಿಡಿಯ ಮಾಜಿ ಮುಖ್ಯ ಸಂಖ್ಯಾಶಾಸ್ತ್ರಜ್ಞ ಪಾಲ್ ಶ್ರೇಯರ್, ಬ್ಯಾಂಕ್‌ ಆಫ್‌ ಇಂಟರ್‌ನ್ಯಾಷನಲ್‌ ಸೆಟಲ್‌ಮೆಂಟ್ಸ್‌ನ ಬ್ರೂನೋ ಟಿಸ್ಸಾಟ್ ಮತ್ತು ಆರ್‌ಬಿಐನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಸುದರ್ಶನ್‌ ಸೇನ್‌, ಆರ್‌ಬಿಐನ ಕಾರ್ಯ ನಿರ್ವಾಹಕ ನಿರ್ದೇಶಕರಾದ ಮುನೀಶ್‌ ಕಪೂರ್‌ ಮತ್ತು ಓ.ಪಿ.ಮಾಲ್‌ ತಜ್ಞರ ಸಮಿತಿಯ ಸದಸ್ಯರಾಗಿರುತ್ತಾರೆ ಎಂದು ಆರ್‌ಬಿಐ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.