ADVERTISEMENT

ರಿಯಲ್ ಎಸ್ಟೇಟ್‌ ಮಾರುಕಟ್ಟೆಗೆ ಸರ್ಕಾರದ ನೆರವು ಅಗತ್ಯ: ಎಂ.ಆರ್. ಜೈಶಂಕರ್

2025ರಲ್ಲಿ ₹20 ಸಾವಿರ ಕೋಟಿ ಮೌಲ್ಯದ ಮನೆ ಮಾರಾಟ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 15:59 IST
Last Updated 23 ಜನವರಿ 2026, 15:59 IST
   

ಬೆಂಗಳೂರು: ‘2025ರಲ್ಲಿ ದಕ್ಷಿಣ ಭಾರತದ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿನ ಮನೆಗಳ ಮಾರಾಟದ ಮೌಲ್ಯವು ಅಂದಾಜು ₹20 ಸಾವಿರ ಕೋಟಿ ದಾಟಿದೆ’ ಎಂದು ಬ್ರಿಗೇಡ್ ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ಜೈಶಂಕರ್ ಹೇಳಿದ್ದಾರೆ.

ಅಖಿಲ ಭಾರತದ ಮಟ್ಟಕ್ಕೆ ಹೋಲಿಸಿದರೆ, ದಕ್ಷಿಣ ಭಾರತದ ರಿಯಲ್ ಎಸ್ಟೇಟ್‌ ಮಾರುಕಟ್ಟೆ ಹಿಂದುಳಿದಿದೆ. ಕೊಯಮತ್ತೂರು, ಕೊಚ್ಚಿನ್, ತಿರುವನಂತಪುರ, ವಿಶಾಖಪಟ್ಟಣಂ ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ರಿಯಲ್ ಎಸ್ಟೇಟ್‌ ಮಾರುಕಟ್ಟೆಯ ಅಭಿವೃದ್ಧಿಗೆ ಸರ್ಕಾರದ ನೆರವು ಅಗತ್ಯ ಎಂದು ಕ್ರೆಡಾಯ್‌ ಸೌತ್‌ಕಾನ್ 2026ರಲ್ಲಿ ಹೇಳಿದ್ದಾರೆ.

ದಕ್ಷಿಣ ಭಾರತದ ವಾಣಿಜ್ಯ ರಿಯಲ್ ಎಸ್ಟೇಟ್‌ ಮಾರುಕಟ್ಟೆಯು 2030ರ ವೇಳೆಗೆ ಸದೃಢವಾಗಿ ಬೆಳವಣಿಗೆ ಕಾಣಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ರಾಜ್ಯದಲ್ಲೂ ಸಹ ಎರಡು ಮತ್ತು ಮೂರನೇ ಹಂತದ ನಗರಗಳು ತ್ವರಿತವಾಗಿ ಪ್ರಗತಿ ಕಾಣುತ್ತಿವೆ. ಅಲ್ಲದೆ, ಮುಂದಿನ ದಿನಗಳಲ್ಲಿ ಈ ವಲಯದಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳು ಸೃಷ್ಟಿ ಆಗಲಿವೆ ಎಂದು ಕ್ರೆಡಾಯ್‌ನ ಕರ್ನಾಟಕದ ಅಧ್ಯಕ್ಷ ಭಾಸ್ಕರ್ ಟಿ. ನಾಗೇಂದ್ರಪ್ಪ ಅವರು ಹೇಳಿದ್ದಾರೆ.

ರಿಯಲ್‌ ಎಸ್ಟೇಟ್‌ ವಲಯದಲ್ಲಿ ನಂಬಿಕೆ ಅಗತ್ಯ. ಮನೆ ಖರೀದಿ ಮಾಡುವವರ ವಿಶ್ವಾಸವನ್ನು ಪಡೆಯುವುದು ಅತಿ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಕ್ರೆಡಾಯ್‌ನ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳದ ಅಧ್ಯಕ್ಷರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.