ADVERTISEMENT

ರಿಯಲ್‌ ಎಸ್ಟೇಟ್‌ ವಲಯದ ಕುಬೇರರು

ಪಿಟಿಐ
Published 22 ನವೆಂಬರ್ 2018, 20:00 IST
Last Updated 22 ನವೆಂಬರ್ 2018, 20:00 IST
   

ಮುಂಬೈ: ದೇಶದ ರಿಯಲ್‌ ಎಸ್ಟೇಟ್‌ ವಲಯವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಮುಂಚೂಣಿಯಲ್ಲಿ ಇರುವ 100 ಉದ್ದಿಮೆದಾರರ ಸಂಪತ್ತು ಒಂದು ವರ್ಷಾವಧಿಯಲ್ಲಿ (2017 ರಿಂದ 2018ರ ಸೆಪ್ಟೆಂಬರ್‌) ಶೇ 27ರಷ್ಟು ಹೆಚ್ಚಾಗಿ ₹ 2.37 ಲಕ್ಷ ಕೋಟಿಗೆ ತಲುಪಿದೆ.

ಲೋಧಾ ಗ್ರೂಪ್‌ನ ಸ್ಥಾಪಕ ಮಂಗಳ ಪ್ರಭಾತ್‌ ಲೋಧಾ ಅವರು ಮೊದಲ ಸ್ಥಾನದಲ್ಲಿ ಇದ್ದಾರೆ. ಅತಿ ಹೆಚ್ಚಿನ ಸಂಖ್ಯೆಯ ಕುಬೇರರನ್ನು ಹೊಂದಿರುವ ನಗರಗಳ ಪೈಕಿ ಬೆಂಗಳೂರು ಮೂರನೇ ಸ್ಥಾನದಲ್ಲಿ ಇದೆ. ಬೆಂಗಳೂರಿನ ಎಂಬಸಿ ಗ್ರೂಪ್‌ನ ಜಿತೇಂದ್ರ ವಿರ್ವಾಣಿ ಅವರು ₹ 23,160 ಕೋಟಿ ಸಂಪತ್ತಿನ ಒಡೆಯರಾಗಿ ಎರಡನೆ ಸ್ಥಾನದಲ್ಲಿ ಇದ್ದಾರೆ. ಹುರುನ್‌ ಶ್ರೀಮಂತರ ಪಟ್ಟಿ ಪ್ರಕಾರ, ಬಿಜೆಪಿ ಮುಖಂಡರೂ ಆಗಿರುವ ಲೋಧಾ ಅವರು ₹ 27,150 ಕೋಟಿ ಸಂಪತ್ತು ಹೊಂದಿ ಮೊದಲ ಸ್ಥಾನದಲ್ಲಿ ಇದ್ದಾರೆ. 2017ರಲ್ಲಿ ಇವರು ಎರಡನೆ ಸ್ಥಾನದಲ್ಲಿ ಇದ್ದರು.

2017ರಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಪೈಕಿ ಮೊದಲ ಸ್ಥಾನದಲ್ಲಿದ್ದ ಡಿಎಲ್‌ಎಫ್‌ ಗ್ರೂಪ್‌ನ ಸ್ಥಾಪಕ ಕುಶಾಪ್‌ ಪಾಲ್‌ ಸಿಂಗ್‌ ಅವರು ಮೊದಲ 10 ಮಂದಿ ಕುಬೇರರ ಪಟ್ಟಿಯಲ್ಲಿನ ಸ್ಥಾನ ಕಳೆದುಕೊಂಡಿದ್ದಾರೆ. ಹಿಂದಿನ ವರ್ಷ, ₹ 23,460 ಕೋಟಿ ಸಂಪತ್ತು ಹೊಂದಿ ಮೊದಲ ಸ್ಥಾನದಲ್ಲಿದ್ದ ಇವರು, ಈ ಬಾರಿ ಮೊದಲ 10 ಸ್ಥಾನಗಳಿಂದ ಹೊರಗೆ ಉಳಿದಿದ್ದಾರೆ. ಇವರು ತಮ್ಮೆಲ್ಲ ಪಾಲನ್ನು ಮಗ ರಾಜೀವ್‌ ಸಿಂಗ್‌ ಮತ್ತು ಮಗಳು ಪಿಯಾ ಅವರಿಗೆ ಹಂಚಿದ್ದಾರೆ. ಹೀಗಾಗಿ ರಾಜೀವ್‌ ಸಿಂಗ್‌ ₹ 17,690 ಕೋಟಿ ಸಂಪತ್ತಿನ ಮೂಲಕ ಮೂರನೆ ಸ್ಥಾನದಲ್ಲಿ ಇದ್ದಾರೆ. ಗರಿಷ್ಠ ಸಂಖ್ಯೆಯ ಸಿರಿವಂತರು ಮುಂಬೈನಲ್ಲಿ ನೆಲೆಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.