ADVERTISEMENT

ಡಬ್ಬಿ, ಕಡ್ಡಿ ಮೆಣಸಿಗೆ ದಾಖಲೆ ಬೆಲೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 19:32 IST
Last Updated 28 ಡಿಸೆಂಬರ್ 2020, 19:32 IST
ಬ್ಯಾಡಗಿ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆಯಲ್ಲಿ ಮಾರಾಟವಾದ ಡಬ್ಬಿ ಮೆಣಸಿನಕಾಯಿಯನ್ನು ಕೈಯಲ್ಲಿ ಹಿಡಿದು ಆನಂದಿಸುತ್ತಿರುವ ರೈತರು, ವರ್ತಕರು ಹಾಗೂ ಎಪಿಎಂಸಿ ಸಿಬ್ಬಂದಿ
ಬ್ಯಾಡಗಿ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆಯಲ್ಲಿ ಮಾರಾಟವಾದ ಡಬ್ಬಿ ಮೆಣಸಿನಕಾಯಿಯನ್ನು ಕೈಯಲ್ಲಿ ಹಿಡಿದು ಆನಂದಿಸುತ್ತಿರುವ ರೈತರು, ವರ್ತಕರು ಹಾಗೂ ಎಪಿಎಂಸಿ ಸಿಬ್ಬಂದಿ   

ಬ್ಯಾಡಗಿ (ಹಾವೇರಿ): ಪಟ್ಟಣದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೋಮವಾರ ಟೆಂಡರ್‌ಗಿಟ್ಟ ಪ್ರತಿ ಕ್ವಿಂಟಲ್‌ ಡಬ್ಬಿ ಮೆಣಸಿನಕಾಯಿಗೆ ₹50,111 ಹಾಗೂ ಕಡ್ಡಿ ಮೆಣಸಿನಕಾಯಿಗೆ ₹38,009 ದಾಖಲೆಯ ಬೆಲೆ ದೊರೆತಿದೆ.

ಗದಗ ಜಿಲ್ಲೆ ಬೆಟಗೇರಿಯ ರೈತ ಮಲ್ಲಿಕಾರ್ಜುನ ಕರೆಮಸ್ಟಿ ಅವರು ಬೆಳೆದ ಡಬ್ಬಿ ಮೆಣಸಿನಕಾಯಿಗೆ ವರ್ತಕ ಆರ್‌.ಆರ್‌.ಆಲದಗೇರಿ ದಾಖಲೆಯ ಬೆಲೆ ನೀಡಿ ಖರೀದಿಸಿದ್ದಾರೆ.

ಮಾರುಕಟ್ಟೆ ಇತಿಹಾಸದಲ್ಲಿಯೇ ಡಬ್ಬಿ ಮೆಣಸಿನಕಾಯಿಗೆ ದೊರೆತ ಅತಿ ಹೆಚ್ಚಿನ ಬೆಲೆ ಇದು ಎನ್ನಲಾಗಿದೆ. ಕಳೆದ ವಾರ ಪ್ರತಿ ಕ್ವಿಂಟಲ್‌ ಡಬ್ಬಿ ಮೆಣಸಿನಕಾಯಿಗೆ ₹45,111 ಗರಿಷ್ಠ ಬೆಲೆ ನೀಡಿ ಖರೀದಿಸಲಾಗಿತ್ತು. ಗುಂಟೂರು ತಳಿ ಮೆಣಸಿನಕಾಯಿ ಕನಿಷ್ಠ ₹ 600 ಹಾಗೂ ಗರಿಷ್ಠ ಬೆಲೆ ₹ 13,509 ಸ್ಥಿರತೆ ಕಾಯ್ದುಕೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.