ADVERTISEMENT

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ನಷ್ಟ ₹ 2,206 ಕೋಟಿ

ಪಿಟಿಐ
Published 4 ಅಕ್ಟೋಬರ್ 2020, 14:39 IST
Last Updated 4 ಅಕ್ಟೋಬರ್ 2020, 14:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: 2019–20ನೇ ಹಣಕಾಸು ವರ್ಷದಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ (ಆರ್‌ಆರ್‌ಬಿ) ಒಟ್ಟಾರೆ ನಷ್ಟವು ₹ 2,206 ಕೋಟಿಗಳಷ್ಟಾಗಿದೆ.

ಈ ಹಣಕಾಸು ವರ್ಷದಲ್ಲಿ 26 ಆರ್‌ಆರ್‌ಬಿಗಳು ಒಟ್ಟು ₹ 2,203 ಕೋಟಿ ಲಾಭ ಗಳಿಸಿದ್ದರೆ, 19 ಬ್ಯಾಂಕ್‌ಗಳು ಒಟ್ಟು ₹ 4,409 ಕೋಟಿ ನಷ್ಟ ಅನುಭವಿಸಿವೆ.

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ (ನಬಾರ್ಡ್‌) ಎನ್‌ಶ್ಯೂರ್‌ ಜಾಲತಾಣಕ್ಕೆ ಆರ್‌ಆರ್‌ಬಿಗಳು ಸಲ್ಲಿಸಿರುವ ಮಾಹಿತಿ ಆಧರಿಸಿ, ನಬಾರ್ಡ್‌ ಈ ಅಂಕಿ–ಅಂಶ ಪ್ರಕಟಿಸಿದೆ.

ADVERTISEMENT

2020ರ ಮಾರ್ಚ್ 31ರ ಅಂತ್ಯದ ವೇಳೆಗೆ 26 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳ 685 ಜಿಲ್ಲೆಗಳಲ್ಲಿ 45 ಆರ್‌ಆರ್‌ಬಿಗಳು ಕಾರ್ಯನಿರ್ವಹಿಸುತ್ತಿದ್ದವು.

ಇವುಗಳ ಒಟ್ಟಾರೆ ವಹಿವಾಟು ಮೊತ್ತ ₹ 7.77 ಲಕ್ಷ ಕೋಟಿಗಳಷ್ಟಿದೆ. ಠೇವಣಿ ಮತ್ತು ಮುಂಗಡ ಶೇ 9.5 ರಿಂದ ಶೇ 10.2ಕ್ಕೆ ಏರಿಕೆಯಾಗಿದೆ. ಬಾಕಿ ಇರುವ ಸಾಲದ ಸರಾಸರಿ ಮೊತ್ತವು ₹ 2.80 ಲಕ್ಷ ಕೋಟಿಗಳಿಂದ ₹ 2.98 ಲಕ್ಷ ಕೋಟಿಗಳಿಗೆ ಏರಿಕೆ ಕಂಡಿದೆ.

ಆದ್ಯತಾ ವಲಯಕ್ಕೆ ನೀಡಿರುವ ಸಾಲವು ₹ 2.70 ಲಕ್ಷ ಕೋಟಿ (ಶೇ 90.6) ಇದೆ. ಒಟ್ಟಾರೆ ಸಾಲದಲ್ಲಿ ಕೃಷಿ ಮತ್ತು ಎಂಎಸ್‌ಎಂಇಗಳಿಗೆ ನೀಡಿರುವ ಸಾಲದ ಪ್ರಮಾಣ ಕ್ರಮವಾಗಿ ಶೇ 70 ಮತ್ತು ಶೇ 12ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.