ADVERTISEMENT

ರಿಲಯನ್ಸ್ ಎಂ–ಕ್ಯಾಪ್‌ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 16:32 IST
Last Updated 28 ಏಪ್ರಿಲ್ 2025, 16:32 IST
ರಿಲಯನ್ಸ್ ಇಂಡಸ್ಟ್ರೀಸ್
ರಿಲಯನ್ಸ್ ಇಂಡಸ್ಟ್ರೀಸ್   

ನವದೆಹಲಿ (ಪಿಟಿಐ): ಸೋಮವಾರದ ವಹಿವಾಟಿನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಮೌಲ್ಯ ಶೇ 5ಕ್ಕೂ ಹೆಚ್ಚು ಏರಿಕೆಯಾಗಿದೆ. 

ಷೇರಿನ ಮೌಲ್ಯ ಹೆಚ್ಚಳದಿಂದ ಕಂಪನಿಯ ಮಾರುಕಟ್ಟೆ ಮೌಲ್ಯಕ್ಕೆ (ಎಂ–ಕ್ಯಾಪ್‌) ₹92,629 ಕೋಟಿ ಸೇರ್ಪಡೆಯಾಗಿದೆ. ಒಟ್ಟು ಎಂ–ಕ್ಯಾಪ್‌ ₹18.51 ಲಕ್ಷ ಕೋಟಿಯಾಗಿದೆ.

ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಪ್ರತಿ ಷೇರಿನ ಮೌಲ್ಯ ಕ್ರಮವಾಗಿ ಶೇ 5.27 ಮತ್ತು ಶೇ 5.06ರಷ್ಟು ಹೆಚ್ಚಳವಾಗಿದೆ. ಷೇರಿನ ಬೆಲೆಯು ₹1,368 ಮತ್ತು ₹1,366 ಆಗಿದೆ. 

ADVERTISEMENT

ಕಂಪನಿಯು ಮಾರ್ಚ್‌ ತ್ರೈಮಾಸಿಕದಲ್ಲಿ ₹19,407 ಕೋಟಿ ನಿವ್ವಳ ಲಾಭ ಗಳಿಸಿದೆ. ಇದರಿಂದ ಸೋಮವಾರದ ವಹಿವಾಟಿನಲ್ಲಿ ಸೂಚ್ಯಂಕಗಳು ಏರಿಕೆ ಕಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.