ರಿಲಯನ್ಸ್(ಪ್ರಾತಿನಿಧಿಕ ಚಿತ್ರ)
ನವದೆಹಲಿ (ಪಿಟಿಐ): 2023–24ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಪವರ್ ಕಂಪನಿಗೆ ₹1,136.57 ಕೋಟಿ ನಿವ್ವಳ ನಷ್ಟವಾಗಿದೆ.
ನಿರ್ವಹಣಾ ವೆಚ್ಚದ ಹೆಚ್ಚಳವೇ ಈ ನಷ್ಟಕ್ಕೆ ಕಾರಣವಾಗಿದೆ ಎಂದು ಕಂಪನಿಯು ಪೇರುಪೇಟೆಗೆ ತಿಳಿಸಿದೆ.
ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿಯೂ ಕಂಪನಿಗೆ ₹291.54 ಕೋಟಿ ನಿವ್ವಳ ನಷ್ಟವಾಗಿತ್ತು.
ಆದರೆ, ಕಂಪನಿಯ ವರಮಾನದಲ್ಲಿ ಏರಿಕೆಯಾಗಿದೆ. ಹಿಂದಿನ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ₹1,936.29 ಕೋಟಿ ಲಾಭ ಗಳಿಸಿತ್ತು. ಈ ಬಾರಿ ₹2,001.54 ಕೋಟಿಗೆ ಏರಿಕೆ ಆಗಿದೆ. ನಿರ್ವಹಣಾ ವೆಚ್ಚವು ₹2,126.33 ಕೋಟಿಯಿಂದ ₹3,179.08 ಕೋಟಿಗೆ ಹೆಚ್ಚಳವಾಗಿದೆ ಎಂದು ಕಂಪನಿಯು ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.