ADVERTISEMENT

ಟಿ.ವಿ. ಆಮದಿಗೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 17:08 IST
Last Updated 30 ಜುಲೈ 2020, 17:08 IST

ನವದೆಹಲಿ: ಕಲರ್‌ ಟಿ.ವಿ. ಆಮದಿನ ಮೇಲೆ ಕೇಂದ್ರ ಸರ್ಕಾರವು ನಿರ್ಬಂಧಗಳನ್ನು ವಿಧಿಸಿದೆ. ದೇಶಿ ಟಿ.ವಿ. ತಯಾರಕರನ್ನು ಪ್ರೋತ್ಸಾಹಿಸುವ ಹಾಗೂ ಟಿ.ವಿ.ಯಂತಹ ತೀರಾ ಅಗತ್ಯವಲ್ಲದ ವಸ್ತುಗಳನ್ನು ಚೀನಾದಂತಹ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡುವ ಉದ್ದೇಶ ಈ ಕ್ರಮದ ಹಿಂದಿದೆ.

‘ಕಲರ್‌ ಟಿ.ವಿ.ಗೆ ಸಂಬಂಧಿಸಿದ ಆಮದು ನೀತಿಯಲ್ಲಿ ತಿದ್ದುಪಡಿ ತರಲಾಗಿದ್ದು, ಅದನ್ನು ಮುಕ್ತ ವರ್ಗದಿಂದ, ನಿರ್ಬಂಧಿತ ವರ್ಗಕ್ಕೆ ತರಲಾಗಿದೆ’ ಎಂದು ವಿದೇಶ ವಹಿವಾಟುಗಳ ಮಹಾನಿರ್ದೇಶನಾಲಯ ಹೇಳಿದೆ.

‘ನಿರ್ಬಂಧಿತ’ ವರ್ಗದಲ್ಲಿ ಇರುವ ವಸ್ತುಗಳನ್ನು ಆಮದು ಮಾಡಿಕೊಳ್ಳುವವರು ಅದಕ್ಕೆ ಪರವಾನಗಿ ಪಡೆದುಕೊಳ್ಳಬೇಕಾಗುತ್ತದೆ. ಭಾರತಕ್ಕೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಟಿ.ವಿ.ಗಳನ್ನು ರಫ್ತು ಮಾಡುವ ದೇಶ ಚೀನಾ. ನಂತರದ ಸ್ಥಾನಗಳಲ್ಲಿ ವಿಯೆಟ್ನಾಂ, ಮಲೇಷ್ಯಾ, ಹಾಂಗ್‌ಕಾಂಗ್‌, ಕೊರಿಯಾ, ಇಂಡೊನೇಷ್ಯಾ, ಥಾಯ್ಲೆಂಡ್ ಮತ್ತು ಜರ್ಮನಿ ಇವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.