ADVERTISEMENT

ಜೂನ್‌ನಲ್ಲಿ ರಿಟೇಲ್‌ ಮಾರಾಟ ಶೇ 50ರಷ್ಟು ಇಳಿಕೆ

ಪಿಟಿಐ
Published 19 ಜುಲೈ 2021, 16:25 IST
Last Updated 19 ಜುಲೈ 2021, 16:25 IST

ನವದೆಹಲಿ: ಕೋವಿಡ್‌ ಸಾಂಕ್ರಾಮಿಕದ ಎರಡನೇ ಅಲೆಯನ್ನು ನಿಯಂತ್ರಿಸಲು ನಿರ್ಬಂಧಗಳನ್ನು ಜಾರಿಗೊಳಿಸಿದ್ದರಿಂದ 2019ರ ಜೂನ್‌ಗೆ ಹೋಲಿಸಿದರೆ 2021ರ ಜೂನ್‌ನಲ್ಲಿ ರಿಟೇಲ್‌ ಮಾರಾಟವು ಶೇಕಡ 50ರಷ್ಟು ಇಳಿಕೆ ಆಗಿದೆ ಎಂದು ಭಾರತೀಯ ರಿಟೇಲ್‌ ವರ್ತಕರ ಸಂಘವು (ಆರ್‌ಎಐ) ಹೇಳಿದೆ.

ಕ್ರೀಡಾ ಸಾಮಗ್ರಿಗಳ ವಿಭಾಗವು ಶೇ 66ರಷ್ಟು ಮಾರಾಟ ಕುಸಿತ ಕಂಡಿದ್ದರೆ, ಆಹಾರ ಮತ್ತು ದಿನಸಿ ಉತ್ಪನ್ನಗಳ ಮಾರಾಟವು ಶೇ 7ರಷ್ಟು ಇಳಿಕೆ ಆಗಿದೆ ಎಂದು ಅದು ತಿಳಿಸಿದೆ.

ವ್ಯಾಪಾರ ನಡೆಸಲು ಸಮಯದ ನಿರ್ಬಂಧ ಮತ್ತು ವಾರಾಂತ್ಯದ ಕರ್ಫ್ಯೂ ಕಾರಣಗಳಿಂದಾಗಿ ರಿಟೇಲ್‌ ವಹಿವಾಟು ನಡೆಸುವುದು ಕಷ್ಟವಾಗುತ್ತಿದೆ ಎಂದು ಒಕ್ಕೂಟದ ಸಿಇಒ ಕುಮಾರ್ ರಾಜಗೋಪಾಲನ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಮೇ ತಿಂಗಳಿನಲ್ಲಿ ರಿಟೇಲ್‌ ವಹಿವಾಟು ಶೇ 79ರಷ್ಟು ಕುಸಿತ ಕಂಡಿತ್ತು. ಇದಕ್ಕೆ ಹೋಲಿಸಿದರೆ ಜೂನ್‌ ತಿಂಗಳ ವಹಿವಾಟಿನಲ್ಲಿ ಆಗಿರುವ ಕುಸಿತವು ಕಡಿಮೆ ಇದೆ.

ಸೌಂದರ್ಯ ವರ್ಧಕ, ಆರೋಗ್ಯ ಮತ್ತು ವೈಯಕ್ತಿಕ ಕಾಳಜಿಯ ಉತ್ಪನ್ನಗಳ ವಿಭಾಗದ ಮಾರಾಟ ಶೇ 57ರಷ್ಟು ಇಳಿಕೆ ಆಗಿದೆ. ಉಡುಪು ಮತ್ತು ಬಟ್ಟೆ ಮಾರಾಟ ಶೇ 52ರಷ್ಟು, ಪಾದರಕ್ಷೆಗಳ ಮಾರಾಟ ಶೇ 61ರಷ್ಟು, ಗ್ರಾಹಕ ಬಳಕೆ ಮತ್ತು ಎಲೆಕ್ಟ್ರಾನಿಕ್ಸ್‌ ಮಾರಾಟ ಶೇ 46ರಷ್ಟು ಇಳಿಕೆ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.