ADVERTISEMENT

ರಿಲಯನ್ಸ್ ಲಾಭ ₹ 13 ಸಾವಿರ ಕೋಟಿ

ಪಿಟಿಐ
Published 30 ಏಪ್ರಿಲ್ 2021, 16:29 IST
Last Updated 30 ಏಪ್ರಿಲ್ 2021, 16:29 IST

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಮಾರ್ಚ್‌ ತ್ರೈಮಾಸಿಕದ ನಿವ್ವಳ ಲಾಭ ಎರಡು ಪಟ್ಟು ಹೆಚ್ಚಳ ಕಂಡಿದೆ. ಈ ವರ್ಷದ ಮಾರ್ಚ್‌ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯು ₹ 13,227 ಕೋಟಿ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ₹ 6,348 ಕೋಟಿ ಲಾಭ ಗಳಿಸಿತ್ತು.

ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯ ಆದಾಯದಲ್ಲಿ ಶೇಕಡ 13.6ರಷ್ಟು ಹೆಚ್ಚಳ ಆಗಿ, ₹ 1.72 ಲಕ್ಷ ಕೋಟಿಗೆ ತಲುಪಿದೆ.

ರಿಲಯನ್ಸ್ ಸಮೂಹದ ಪ್ರಮುಖ ಕಂಪನಿಯಾದ ‘ಜಿಯೊ’ದ ನಿವ್ವಳ ಲಾಭದಲ್ಲಿ ಶೇ 47.5ರಷ್ಟು ಹೆಚ್ಚಳ ಆಗಿದ್ದು, ಕಂಪನಿಯು ₹ 3,508 ಕೋಟಿ ಲಾಭ ಗಳಿಸಿದೆ. ಈ ಅವಧಿಯಲ್ಲಿ ಕಂ‍ಪನಿಯು 1.54 ಕೋಟಿಗೂ ಹೆಚ್ಚು ಹೊಸ ಚಂದಾದಾರರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಆದರೆ, ಕಂಪನಿಯು ಪ್ರತಿ ಗ್ರಾಹಕನಿಂದ ಪಡೆಯುವ ಆದಾಯವು ₹ 138ಕ್ಕೆ ಇಳಿದಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ಪ್ರತಿ ಗ್ರಾಹಕನಿಂದ ₹ 151 ಆದಾಯ ಸಂಗ್ರಹಿಸುತ್ತಿತ್ತು.

ADVERTISEMENT

ಕೋವಿಡ್–19 ಕಾರಣದಿಂದಾಗಿ ಜನರ ಜೀವನೋಪಾಯಕ್ಕೆ ಏಟು ಬಿದ್ದರೂ, ರಿಲಯನ್ಸ್ ಸಮೂಹವು ಅರ್ಥ ವ್ಯವಸ್ಥೆಯಲ್ಲಿ 75 ಸಾವಿರ ಉದ್ಯೋಗ ಸೃಷ್ಟಿಸಿದೆ ಎಂದು ಕಂಪನಿಯ ಅಧ್ಯಕ್ಷ ಮುಕೇಶ್ ಅಂಬಾನಿ ಹೇಳಿದ್ದಾರೆ. ಉದ್ಯೋಗ ಸೃಷ್ಟಿ ಕುರಿತು ಹೆಚ್ಚಿನ ವಿವರಗಳನ್ನು ಅವರು ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.