ADVERTISEMENT

ರೂಪಾಯಿ ಮೌಲ್ಯ 88 ಪೈಸೆ ಇಳಿಕೆ

ಪಿಟಿಐ
Published 3 ಡಿಸೆಂಬರ್ 2018, 17:45 IST
Last Updated 3 ಡಿಸೆಂಬರ್ 2018, 17:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ನಾಲ್ಕು ವಹಿವಾಟು ದಿನಗಳಲ್ಲಿ ಏರುಮುಖವಾಗಿದ್ದ ರೂಪಾಯಿ ಮೌಲ್ಯ ಸೋಮವಾರ ಇಳಿಕೆ ಕಂಡಿದೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು 88 ಪೈಸೆ ಇಳಿಕೆಯಾಗಿ ಒಂದು ಡಾಲರ್‌ಗೆ ₹ 70.46ಕ್ಕೆ ತಲುಪಿತು.

ಆಮದುದಾರರು ಹೆಚ್ಚಿನ ಪ್ರಮಾಣದಲ್ಲಿ ಡಾಲರ್‌ ಖರೀದಿ ನಡೆಸಿದರು. ಇದರ ಜತೆಗೆ ಕಚ್ಚಾ ತೈಲ ದರ ಶೇ 3.85ರಷ್ಟು ಏರಿಕೆಯಾಗಿ, ಒಂದು ಬ್ಯಾರೆಲ್‌ಗೆ 61.75 ಡಾಲರ್‌ಗೆ ತಲುಪಿರುವುದು ರೂಪಾಯಿ ಮೌಲ್ಯ ಇಳಿಕೆ ಕಾಣುವಂತೆ ಮಾಡಿದೆ.

ADVERTISEMENT

ಭಾರತದ ಜಿಡಿಪಿ ಮತ್ತು ವಿತ್ತೀಯ ಕೊರತೆ ಅಂಕಿ–ಅಂಶಗಳು ಮಾರುಕಟ್ಟೆಯನ್ನು ನಿರಾಶೆಗೊಳಸಿವೆ. ಇದು ಸಹ ರೂಪಾಯಿ ಮೌಲ್ಯ ಇಳಿಕೆಗೆ ಕಾರಣವಾಗಿದೆ ಎಂದು ವರ್ತಕರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.