ADVERTISEMENT

ಡಾಲರ್ ಎದುರು ರೂಪಾಯಿ ಮೌಲ್ಯ 80ರ ಗಡಿ ತಲು‍ಪಲು1 ಪೈಸೆಯಷ್ಟೇ ಬಾಕಿ!

ಪಿಟಿಐ
Published 14 ಜುಲೈ 2022, 16:28 IST
Last Updated 14 ಜುಲೈ 2022, 16:28 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮುಂಬೈ : ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು 80ರ ಗಡಿ ತಲು‍ಪಲು 1 ಪೈಸೆಯ ಅಂತರವಷ್ಟೇ ಬಾಕಿ ಉಳಿದಿದೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಗುರುವಾರದ ಅಂತ್ಯಕ್ಕೆ ರೂಪಾಯಿ ಮೌಲ್ಯವು 79.99ಕ್ಕೆ ತಲುಪಿದೆ. ಗುರುವಾರ ರೂಪಾಯಿ ಮೌಲ್ಯದಲ್ಲಿ 18 ಪೈಸೆ ಇಳಿಕೆ ಆಗಿದೆ.

ಸಗಟು ಹಣದುಬ್ಬರ ಪ್ರಮಾಣವು ಸತತ 15 ತಿಂಗಳುಗಳಿಂದ ಎರಡಂಕಿ ಮಟ್ಟದಲ್ಲಿ ಉಳಿದಿರುವುದು, ದೇಶದ ಚಾಲ್ತಿ ಖಾತೆ ಕೊರತೆ ತೀವ್ರವಾಗುವ ಸಾಧ್ಯತೆ ಇರುವುದು ಹಾಗೂ ವಿದೇಶಿ ಬಂಡವಾಳದ ಹೊರಹರಿವು ರೂಪಾಯಿ ಮೌಲ್ಯ ಇಳಿಕೆಗೆ ಕಾರಣವಾದವು.

ಎಸ್‌ಬಿಐ ಸೇರಿದಂತೆ ಕೆಲವು ಪ್ರಮುಖ ಬ್ಯಾಂಕ್‌ಗಳು ಡಾಲರ್ ಮಾರಾಟದ ಸಂದರ್ಭದಲ್ಲಿ ರೂಪಾಯಿ ಮೌಲ್ಯವನ್ನು 80ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಹೇಳುತ್ತಿವೆ. ವಿದೇಶಿ ಹೂಡಿಕೆದಾರರು ದೇಶದ ಷೇರುಪೇಟೆಗಳಿಂದ ಗುರುವಾರ ಒಟ್ಟು ₹ 309 ಕೋಟಿ ಹಿಂದಕ್ಕೆ ಪಡೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.