ADVERTISEMENT

ಚೇತರಿಸಿಕೊಂಡ ರೂಪಾಯಿ

ಪಿಟಿಐ
Published 16 ಏಪ್ರಿಲ್ 2021, 16:43 IST
Last Updated 16 ಏಪ್ರಿಲ್ 2021, 16:43 IST

ಮುಂಬೈ: ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಶುಕ್ರವಾರ 58 ಪೈಸೆಯಷ್ಟು ಚೇತರಿಕೆ ಕಂಡಿತು. ವಿದೇಶಿ ಬಂಡವಾಳವು ಭಾರತದ ಕಡೆ ಹರಿದುಬಂದಿದ್ದು ರೂಪಾಯಿ ಬಲವರ್ಧನೆಗೆ ನೆರವಾಯಿತು.

ದಿನದ ವಹಿವಾಟಿನ ಆರಂಭದಲ್ಲಿ ಅಮೆರಿಕದ ಡಾಲರ್ ಎದುರು 74.76 ಇದ್ದ ರೂಪಾಯಿ ಮೌಲ್ಯವು, ವಹಿವಾಟಿನ ಕೊನೆಯಲ್ಲಿ 74.35ಕ್ಕೆ ತಲುಪಿತು. ಒಂದು ತಿಂಗಳಿಗೂ ಹೆಚ್ಚಿನ ಅವಧಿಯಲ್ಲಿ ರೂಪಾಯಿ ಮೌಲ್ಯದಲ್ಲಿ ಆಗಿರುವ ಅತ್ಯುತ್ತಮ ಏರಿಕೆ ಇದು. ಗುರುವಾರ ರೂಪಾಯಿ ಮೌಲ್ಯವು ಡಾಲರ್ ಎದುರು 74.93ಕ್ಕೆ ಕುಸಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT