ಮುಂಬೈ (ಪಿಟಿಐ): ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಸತತ ಎರಡನೇ ದಿನವೂ ಏರಿಕೆಯಾಗಿದೆ.
ಗುರುವಾರದ ವಹಿವಾಟಿನಲ್ಲಿ28 ಪೈಸೆ ಹೆಚ್ಚಾಗಿ ಒಂದು ಡಾಲರ್ಗೆ ₹ 71.84ರಂತೆ ವಿನಿಮಯಗೊಂಡಿತು.ಎರಡು ವಹಿವಾಟುಗಳಲ್ಲಿ ರೂಪಾಯಿ ಮೌಲ್ಯ 55 ಪೈಸೆ ಹೆಚ್ಚಾಗಿದೆ.
ಅಮೆರಿಕ ಮತ್ತು ಚೀನಾ ವಾಣಿಜ್ಯ ಮಾತುಕತೆ ಮುಂದುವರಿಸುವುದಾಗಿ ಹೇಳಿವೆ. ಇದರ ಜತೆಗೆ ಡಾಲರ್ ಮೌಲ್ಯ ಇಳಿಕೆಯೂ ರೂಪಾಯಿ ಮೌಲ್ಯ ಹೆಚ್ಚಾಗುವಂತೆ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.