ADVERTISEMENT

ಪಿಎಫ್‌ಆರ್‌ಡಿಎ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 15:39 IST
Last Updated 20 ಜೂನ್ 2025, 15:39 IST
ಪಿಎಫ್‌ಆರ್‌ಡಿಎ
ಪಿಎಫ್‌ಆರ್‌ಡಿಎ   

ನವದೆಹಲಿ (ಪಿಟಿಐ): ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎಫ್‌ಆರ್‌ಡಿಎ) ಅಧ್ಯಕ್ಷರಾಗಿ ಶಿವಸುಬ್ರಮಣಿಯನ್ ರಾಮನ್ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ.

ಹೊಸ ಅಧ್ಯಕ್ಷರ ಅಧಿಕಾರಾವಧಿಯು ಅಧಿಕಾರ ಸ್ವೀಕರಿಸಿದ ದಿನದಿಂದ 5 ವರ್ಷ ಅಥವಾ ಅವರಿಗೆ 65 ವರ್ಷ ತುಂಬುವವರೆಗೆ ಇರಲಿದೆ. ರಾಮನ್ ಅವರು, 1991ರ ಬ್ಯಾಚ್‌ನ ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಸೇವೆಯ ಅಧಿಕಾರಿಯಾಗಿದ್ದಾರೆ ಎಂದು ಪಿಎಫ್‌ಆರ್‌ಡಿಎ ತಿಳಿಸಿದೆ.

ಪಿಎಫ್‌ಆರ್‌ಡಿಎಗೆ ಸೇರುವ ಮೊದಲು ರಾಮನ್ ಅವರು, ಮಹಾ ಲೆಕ್ಕಪರಿಶೋಧಕ ಮತ್ತು ಮಹಾಲೇಖಪಾಲರ (ಸಿಎಜಿ) ಕಚೇರಿಯಲ್ಲಿ ಡೆಪ್ಯುಟಿ ಸಿಎಜಿ ಆಗಿದ್ದರು. ಸಿಡ್ಬಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸೇರಿ ಹಲವು ಹುದ್ದೆಯಲ್ಲಿ ಕೆಲಸ ಮಾಡಿದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.