ಬೆಂಗಳೂರು: ರಿಲಯನ್ಸ್ ಡಿಜಿಟಲ್ ಮಳಿಗೆಗಳಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್25 ಸರಣಿಯ ಫೋನ್‌ಗಳನ್ನು ಗ್ರಾಹಕರು ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಿದ 30 ನಿಮಿಷದೊಳಗೆ ಅವರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ ಎಂದು ರಿಲಯನ್ಸ್ ಕಂಪನಿ ತಿಳಿಸಿದೆ.
ಈ ಸರಣಿಯ ಫೋನ್‌ಗಳು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಗ್ರಾಹಕರು www.reliancedigital.in ಮೂಲಕ ಬುಕಿಂಗ್ ಮಾಡಬಹುದು. ಬುಕಿಂಗ್ ಮಾಡಿದ ದಿನವೇ ಗ್ರಾಹಕರಿಗೆ ತಲುಪಿಸಲಾಗುವುದು. ದೇಶದಾದ್ಯಂತ ಇರುವ 650ಕ್ಕೂ ಹೆಚ್ಚು ಮಳಿಗೆಗಳಲ್ಲಿ ಈ ಸೌಲಭ್ಯ ಲಭ್ಯವಿದೆ ಎಂದು ಹೇಳಿದೆ.
ಗ್ರಾಹಕರು ರಿಲಯನ್ಸ್ ಡಿಜಿಟಲ್‌ನ ವೆಬ್‌ಸೈಟ್‌ಗೆ ಭೇಟಿ ತ್ವರಿತವಾಗಿ ವಿತರಣೆ ಮಾಡುವ ಆಯ್ಕೆ ನಮೂದಿಸಬೇಕು. ಈ ಸೇವೆಯು ಗ್ರಾಹಕರಿಗೆ ಹತ್ತಿರ ಇರುವ ಮಳಿಗೆಗಳಲ್ಲಿ ದೊರೆಯಲಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.