ಬೆಂಗಳೂರು: ಸ್ಯಾಮ್ಸಂಗ್ ಕಂಪನಿಯು ಭಾರತದ ಮಾರುಕಟ್ಟೆಗೆ ಹೊಸ ನಿಯೊ ಕ್ಯುಎಲ್ಇಡಿ ಟಿ.ವಿ.ಗಳನ್ನು ಬಿಡುಗಡೆ ಮಾಡಿದೆ. ಇವುಗಳ ಗಾತ್ರವು 50 ಇಂಚುಗಳಿಂದ 98 ಇಂಚುಗಳವರೆಗೆ ಇದೆ.
ಸ್ಮಾರ್ಟ್ ಸಾಧನಗಳನ್ನು ಸ್ವಯಂಚಾಲಿತವಾಗಿ ಪತ್ತೆ ಮಾಡಿ ಟಿವಿಯೊಂದಿಗೆ ಸಂಪರ್ಕಿಸುವ ‘ಐಒಟಿ ಹಬ್’ ವೈಶಿಷ್ಟ್ಯವನ್ನು ಈ ಟಿ.ವಿ.ಗಳು ಹೊಂದಿವೆ. ಗೇಮಿಂಗ್ ಆಸಕ್ತಿ ಇರುವವರನ್ನೂ ಗಮನದಲ್ಲಿ ಇಟ್ಟುಕೊಂಡು ರೂಪಿಸಲಾಗಿದೆ. ಸೂಪರ್ ಅಲ್ಟ್ರಾವೈಡ್ ಗೇಮ್ವೀವ್, ಗೇಮ್ ಬಾರ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂದು ಕಂಪನಿ ತಿಳಿಸಿದೆ.
ಬೆಲೆ ಮತ್ತು ಲಭ್ಯತೆ: ನಿಯೊ ಕ್ಯುಎಲ್ಇಡಿ 8ಕೆ ಟಿವಿ ಬೆಲೆಯು ₹3,14,990ರಿಂದ ಆರಂಭ ಆಗುತ್ತದೆ. 4ಕೆ ಟಿವಿ ಬೆಲೆ ₹1,41,990ರಿಂದ ಆರಂಭ ಆಗುತ್ತದೆ. ಸ್ಯಾಮ್ಸಂಗ್ ರಿಟೇಲ್ ಮಳಿಗೆ ಸೇರಿದಂತೆ ಪ್ರಮುಖ ಎಲೆಕ್ಟ್ರಾನಿಕ್ಸ್ ಮಳಿಗೆಗಳು ಹಾಗೂ ಆನ್ಲೈನ್ನಲ್ಲಿ ಸ್ಯಾಮ್ಸಂಗ್ ಶಾಪ್ ಒಳಗೊಂಡು ಪ್ರಮುಖ ಆನ್ಲೈನ್ ವೇದಿಕೆಗಳಲ್ಲಿ ಲಭ್ಯವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.