ADVERTISEMENT

ಸೌದಿ ಅರೇಬಿಯಾ : ಭಾರತದಅತಿದೊಡ್ಡ ತೈಲ ಪೂರೈಕೆ ದೇಶ

ತೈಲ ಪೂರೈಕೆ: ಮತ್ತೆ ಮುಂಚೂಣಿಗೆ ಬಂದ ಸೌದಿ ಅರೇಬಿಯಾ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 20:00 IST
Last Updated 15 ಆಗಸ್ಟ್ 2019, 20:00 IST
   

ನವದೆಹಲಿ (ಪಿಟಿಐ): ರಿಲಯನ್ಸ್‌ ಇಂಡಸ್ಟ್ರೀಸ್‌ನ ತೈಲ ಮತ್ತು ರಾಸಾಯನಿಕಗಳ (ಒ2ಸಿ) ವಹಿವಾಟಿನ ಶೇ 20ರಷ್ಟು ಪಾಲನ್ನು ಅರಾಮ್ಕೊ ಖರೀದಿಸಲಿರುವುದರಿಂದ ಸೌದಿ ಅರೇಬಿಯಾ, ಭಾರತದ ಅತಿದೊಡ್ಡ ತೈಲ ಪೂರೈಕೆ ದೇಶವಾಗಲಿದೆ.

ಭಾರತಕ್ಕೆ ಕಚ್ಚಾ ತೈಲ ಪೂರೈಕೆಯಲ್ಲಿ ಸೌದಿ ಅರೇಬಿಯಾ ಮೊದಲಿನಿಂದಲೂ ಮುಂಚೂಣಿಯಲ್ಲಿತ್ತು. ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಈ ಸ್ಥಾನವನ್ನು ಇರಾಕ್‌ಗೆ ಬಿಟ್ಟುಕೊಟ್ಟಿತ್ತು. ಸೌದಿ ಅರೇಬಿಯಾದ ಅರಾಮ್ಕೊ ಈಗ ‘ಆರ್‌ಐಎಲ್‌’ನ ‘ಒ2ಸಿ’ ವಹಿವಾಟಿನಲ್ಲಿ ಪಾಲು ಖರೀದಿಸಲಿರುವುದರಿಂದ ಮತ್ತೆ ಮುಂಚೂಣಿಗೆ ಬರಲಿದೆ.

ಈ ಎರಡೂ ಸಂಸ್ಥೆಗಳ ನಡುವಣ ಒಪ್ಪಂದದಿಂದಾಗಿ ಅಲಾಮ್ಕೊ, ಪ್ರತಿ ದಿನ 5 ಲಕ್ಷ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲವನ್ನು ಪೂರೈಸಲಿದೆ. ಇದು ವರ್ಷಕ್ಕೆ 2.5 ಕೋಟಿ ಟನ್‌ಗಳಷ್ಟು ಆಗಲಿದೆ. ಭಾರತದಲ್ಲಿ ಇಂಧನ ಉತ್ಪನ್ನಗಳ ಮಾರಾಟ ಮಾಡಲು ಕೂಡ ಅರಾಮ್ಕೊ ಆಸಕ್ತಿ ತಳೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.