ADVERTISEMENT

ತೈಲ ಉತ್ಪಾದನೆ ಹೆಚ್ಚಿಸಲಿರುವ ಸೌದಿ

ರಾಯಿಟರ್ಸ್
Published 4 ನವೆಂಬರ್ 2021, 16:32 IST
Last Updated 4 ನವೆಂಬರ್ 2021, 16:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೈರೊ: ಸೌದಿ ಅರೇಬಿಯಾ ಡಿಸೆಂಬರ್‌ನಲ್ಲಿ ಪ್ರತಿದಿನ 1 ಕೋಟಿ ಬ್ಯಾರೆಲ್‌ಗಿಂತ ಹೆಚ್ಚು ಕಚ್ಚಾ ತೈಲ ಉತ್ಪಾದನೆ ಮಾಡಲಿದೆ. ಕೋವಿಡ್ ಸಾಂಕ್ರಾಮಿಕ ಶುರುವಾದ ನಂತರದಲ್ಲಿ ಸೌದಿ ಅರೇಬಿಯಾ ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಉತ್ಪಾದಿಸಲಿದೆ.

ಗುರುವಾರ ಸಭೆ ಸೇರಿದ್ದ ತೈಲ ರಫ್ತು ದೇಶಗಳ ಒಕ್ಕೂಟ ಮತ್ತು ಒಕ್ಕೂಟದ ಮಿತ್ರ ರಾಷ್ಟ್ರಗಳು (ಒಪೆಕ್‌+), ಈ ಮೊದಲು ಮಾಡಿದ್ದ ತೀರ್ಮಾನಕ್ಕೆ ಅನುಗುಣವಾಗಿ, ತೈಲ ಉತ್ಪಾದನೆಯನ್ನು ದಿನಕ್ಕೆ ನಾಲ್ಕು ಲಕ್ಷ ಬ್ಯಾರಲ್‌ನಷ್ಟು ಮಾತ್ರ ಹೆಚ್ಚಿಸಲು ಸಮ್ಮತಿಸಿವೆ. ಕಚ್ಚಾ ತೈಲ ಉತ್ಪಾದನೆ ಜಾಸ್ತಿ ಮಾಡುವಂತೆ ಅಮೆರಿಕ ಆಗ್ರಹಿಸಿದ್ದರೂ ಒಪೆಕ್‌+ ಈ ನಿಲುವು ತಾಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT