ADVERTISEMENT

ಎಸ್‌ಬಿಐ: ‘ಇವಿ’ ಸಾಲ ಬಡ್ಡಿ ದರ ಶೇ 0.20 ಕಡಿತ

ಪಿಟಿಐ
Published 22 ಏಪ್ರಿಲ್ 2019, 20:01 IST
Last Updated 22 ಏಪ್ರಿಲ್ 2019, 20:01 IST
   

ಮುಂಬೈ: ವಿದ್ಯುತ್‌ ಚಾಲಿತ ವಾಹನಗಳ ಮಾರಾಟ ಉತ್ತೇಜಿಸಲು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ವಾಹನ ಖರೀದಿ ಸಾಲದ ಬಡ್ಡಿ ದರದಲ್ಲಿ ಕಡಿತ ಮಾಡಿದೆ.

ಇತರ ವಾಹನ ಖರೀದಿ ಸಾಲದ ಬಡ್ಡಿ ದರಕ್ಕೆ ಹೋಲಿಸಿದರೆ ವಿದ್ಯುತ್‌ ಚಾಲಿತ (ಇವಿ) ವಾಹನ ಖರೀದಿ ಬಡ್ಡಿ ದರದಲ್ಲಿ ಶೇ 0.20ರಷ್ಟು ರಿಯಾಯ್ತಿ ನೀಡಲಾಗಿದೆ. ಸಾಲ ಮರುಪಾವತಿ ಅವಧಿಯನ್ನು 8 ವರ್ಷಗಳಿಗೆ ವಿಸ್ತರಿಸಲಾಗಿದೆ. ಮೊದಲ 6 ತಿಂಗಳಲ್ಲಿ ಸಾಲ ಮಂಜೂರಾತಿ ಪ್ರಕ್ರಿಯೆ ಶುಲ್ಕವೂ ಇರುವುದಿಲ್ಲ.

‘ಜನರು ವಿದ್ಯುತ್‌ ಚಾಲಿತ ವಾಹನಗಳ ಖರೀದಿಯತ್ತ ಒಲವು ಹೊಂದಲು ಈ ನಿರ್ಧಾರವು ಉತ್ತೇಜನ ನೀಡಲಿದೆ’ ಎಂದು ಬ್ಯಾಂಕ್‌ನ ರಿಟೇಲ್‌ ಬ್ಯಾಂಕಿಂಗ್‌ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಪಿ. ಕೆ. ಗುಪ್ತ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.