ADVERTISEMENT

ಎಸ್‌ಬಿಐ: ‘ಎಂಸಿಎಲ್‌ಆರ್‌’ಆಧರಿಸಿದ ಬಡ್ಡಿ ದರ ಕಡಿತ

ಪಿಟಿಐ
Published 9 ಡಿಸೆಂಬರ್ 2019, 19:45 IST
Last Updated 9 ಡಿಸೆಂಬರ್ 2019, 19:45 IST
ಎಸ್‌ಬಿಐ
ಎಸ್‌ಬಿಐ   

ಮುಂಬೈ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ತನ್ನ ಗೃಹ ಸಾಲಗಾರರ ತಿಂಗಳ ಸಮಾನ ಕಂತು (ಇಎಂಐ) ಕಡಿಮೆಯಾಗುವ ಸಿಹಿ ಸುದ್ದಿ ಪ್ರಕಟಿಸಿದೆ.

ಬ್ಯಾಂಕ್‌ನ ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ ಬಡ್ಡಿ ದರವನ್ನು (ಎಂಸಿಎಲ್‌ಆರ್‌) ಶೇ 0.10ರಷ್ಟು ಕಡಿಮೆ ಮಾಡಲಾಗಿದೆ. ಇದು ಮಂಗಳವಾರದಿಂದಲೇ (ಡಿ.10) ಜಾರಿಗೆ ಬರುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಬ್ಯಾಂಕ್‌ನ ಇದುವರೆಗಿನ 8ನೆ ‘ಎಂಸಿಎಲ್‌ಆರ್‌’ ಕಡಿತ ಇದಾಗಿದೆ. ಪ್ರತಿ ತಿಂಗಳೂ ಸಮಾನ ಕಂತಿನ (ಇಎಂಐ) ರೂಪದಲ್ಲಿ ಸಾಲ ಮರು ಪಾವತಿಸುವವರಿಗೆ ಇದರಿಂದ ಪ್ರಯೋಜನ ದೊರೆಯಲಿದೆ. ‘ಇಎಂಐ’ ಹೊರೆ ಕಡಿಮೆಯಾಗಲಿದೆ. ಒಂದು ವರ್ಷಾವಧಿಯಲ್ಲಿ ‘ಎಂಸಿಎಲ್‌ಆರ್’ ಇಳಿಕೆ ಪ್ರಮಾಣವು ಶೇ 0.60ರಷ್ಟಾಗಿದೆ.

ನಿಧಿಗಳ ಮೇಲಿನ ವೆಚ್ಚ ಕಡಿಮೆಯಾಗುತ್ತಿರುವುದರ ಪ್ರಯೋಜನವನ್ನು ಸಾಲಗಾರರಿಗೆ ವರ್ಗಾಯಿಸಲು ಒಂದು ವರ್ಷದ ಅವಧಿಯ ‘ಎಂಸಿಎಲ್‌ಆರ್‌’ ಕಡಿಮೆ ಮಾಡಲಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ. ಹೊಸ ‘ಎಂಸಿಎಲ್‌ಆರ್‌’ ಈಗ ಶೇ 8 ರಿಂದ ಶೇ 7.90ಕ್ಕೆ ಇಳಿದಿದೆ.

ADVERTISEMENT

ಸ್ಥಿರ ಠೇವಣಿ ಬಡ್ಡಿ ದರ ಸ್ಥಿರ: ತನ್ನ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಎಸ್‌ಬಿಐ ಬದಲಾಯಿಸಿಲ್ಲ.

ತಿಂಗಳು; ಎಂಸಿಎಲ್ಆರ್ (%)

ಡಿಸೆಂಬರ್‌,2018;8.50

ಡಿಸೆಂಬರ್‌,2019;7.90

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.