ADVERTISEMENT

ಇನ್ಫೊಸಿಸ್‌ನ 85 ಲಕ್ಷ ಷೇರು ಮಾರಿದ ಶಿಬುಲಾಲ್‌ ಕುಟುಂಬ

ಪಿಟಿಐ
Published 25 ಜುಲೈ 2020, 11:18 IST
Last Updated 25 ಜುಲೈ 2020, 11:18 IST
ಶಿಬುಲಾಲ್‌
ಶಿಬುಲಾಲ್‌   

ಬೆಂಗಳೂರು: ಇನ್ಫೊಸಿಸ್‌ ಸಹ ಸ್ಥಾಪಕ ಎಸ್‌.ಡಿ. ಶಿಬುಲಾಲ್‌ ಅವರ ಕುಟುಂಬದ ಸದಸ್ಯರು ಕಂಪನಿಯಲ್ಲಿ ಹೊಂದಿದ್ದ ಷೇರುಗಳಲ್ಲಿ 85 ಲಕ್ಷ ಷೇರುಗಳನ್ನು ಜುಲೈ 22-24ರ ಅವಧಿಯಲ್ಲಿ ಮಾರಾಟ ಮಾಡಿದ್ದಾರೆ.

ಶಿಬುಲಾಲ್‌ ಅವರ ಮಗ ಶ್ರೇಯಸ್‌ ಅವರು 40 ಲಕ್ಷ (ಶೇ 0.09) ಷೇರುಗಳನ್ನು ಮಾರಾಟ ಮಾಡಿದ್ದಾರೆ. ಅವರು ಒಟ್ಟಾರೆ ಶೇ 0.66ರಷ್ಟು ಷೇರುಗಳನ್ನು ಹೊಂದಿದ್ದರು, ಈ ಮಾರಾಟದಿಂದ ಅವರ ಬಳಿ ಶೇ 0.57ರಷ್ಟು ಷೇರುಗಳು ಉಳಿದಂತಾಗಿದೆ. ಕಂಪನಿಯು ಷೇರುಪೇಟೆಗೆ ಈ ಮಾಹಿತಿ ನೀಡಿದೆ.

ಅವರ ಅಳಿಯ ಗೌರವ್‌ ಮನ್‌ಚಂದ 18 ಲಕ್ಷ (ಶೇ 0.04) ಷೇರುಗಳನ್ನು ಮಾರಿದ್ದು, ಶೇ 0.32ರಷ್ಟು ಷೇರುಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.

ADVERTISEMENT

ಮೊಮ್ಮಗ ಮಿಲನ್‌ ಶಿಬುಲಾಲ್‌ ಮನ್‌ಚಂದ ಅವರು 15 ಲಕ್ಷ (ಶೇ 0.03) ಷೇರುಗಳನ್ನು ಮಾರಿದ್ದು, ಶೇ 0.33ರಷ್ಟು ಷೇರುಗಳು ಉಳಿದಿವೆ ಎಂದು ಕಂಪನಿ ತಿಳಿಸಿದೆ.

ಶಿಬುಲಾಲ್‌ ಅವರ ಪತ್ನಿ ಕುಮಾರಿ ಅವರು 12 ಲಕ್ಷ (ಶೇ 0.03) ಷೇರುಗಳನ್ನು ಮಾರಾಟ ಮಾಡಿದ್ದಾರೆ. ಅವರ ಬಳಿ ಸದ್ಯ ಶೇ 0.22ರಷ್ಟು ಷೇರುಗಳಿವೆ.

ಶಿಬುಲಾಲ್‌, ನಾರಾಯಣ ಮೂರ್ತಿ ಮತ್ತು ಇನ್ನೂ ಐವರು ಸೇರಿಕೊಂಡು 1981ರಲ್ಲಿ ಇನ್ಫೊಸಿಸ್‌ ಸ್ಥಾಪಿಸಿದರು. ಶಿಬುಲಾಲ್‌ ಅವರು 2007–11ರವರೆಗೆ ಸಿಒಒ ಆಗಿದ್ದರು. ಬಳಿಕ 2011–2014ರ ಅವಧಿಯಲ್ಲಿ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.

ಇನ್ಫೊಸಿಸ್‌ ಸಹ ಸ್ಥಾಪಕ ಕ್ರಿಸ್‌ ಗೋಪಾಲಕೃಷ್ಣನ್‌ ಅವರೊಂದಿಗೆ ಸ್ಥಾಪಿಸಿರುವ ಆ್ಯಕ್ಸಿಲರ್‌ ವೆಂಚರ್ಸ್‌ ಕಂಪನಿಯ ಮೂಲಕ ಶಿಬುಲಾಲ್‌ ಅವರು ಸದ್ಯ ತಂತ್ರಜ್ಞಾನ ನವೋದ್ಯಮಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.