ADVERTISEMENT

₹2 ಕೋಟಿ ಪಾವತಿಸಲು ಆನಂದ್ ಸುಬ್ರಮಣಿಯನ್‌ಗೆ ಸೆಬಿ ತಾಕೀತು

ಪಿಟಿಐ
Published 26 ಏಪ್ರಿಲ್ 2022, 13:44 IST
Last Updated 26 ಏಪ್ರಿಲ್ 2022, 13:44 IST

ನವದೆಹಲಿ: ರಾಷ್ಟ್ರೀಯ ಷೇರುಪೇಟೆಯ (ಎನ್‌ಎಸ್‌ಇ) ಮಾಜಿ ಜಿಒಒ (ಗ್ರೂಪ್ ಆಪರೇಟಿಂಗ್ ಆಫೀಸರ್) ಆನಂದ್ ಸುಬ್ರಮಣಿಯನ್ ಅವರಿಗೆ ನೋಟಿಸ್ ಜಾರಿಗೊಳಿಸಿರುವ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಷೇರುಪೇಟೆಯ ಆಡಳಿತದಲ್ಲಿನ ಲೋಪಗಳಿಗಾಗಿ ₹ 2.05 ಕೋಟಿ ದಂಡ ಪಾವತಿಸುವಂತೆ ಸೂಚಿಸಿದೆ.

ಹದಿನೈದು ದಿನಗಳಲ್ಲಿ ಈ ಮೊತ್ತ ಪಾವತಿಸದೆ ಇದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಸುಬ್ರಮಣಿಯನ್ ಅವರ ನೇಮಕ ಪ್ರಕ್ರಿಯೆಯಲ್ಲಿನ ಲೋಪಗಳಿಗಾಗಿ ಸೆಬಿ, ಎನ್‌ಎಸ್‌ಇ ಮಾಜಿ ಅಧಿಕಾರಿಗಳಾದ ಚಿತ್ರಾ ರಾಮಕೃಷ್ಣ ಮತ್ತು ರವಿ ನಾರಾಯಣ್ ಅವರ ವಿರುದ್ಧ ಆರೋಪ ಹೊರಿಸಿದೆ. ಚಿತ್ರಾ ಅವರಿಗೆ ₹ 3 ಕೋಟಿ, ನಾರಾಯಣ್ ಅವರಿಗೆ ₹ 2 ಕೋಟಿ ದಂಡ ವಿಧಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.