ADVERTISEMENT

ತಗ್ಗಲಿದೆ ಐಪಿಒ ಲಿಸ್ಟಿಂಗ್ ಕಾಲಮಿತಿ

​ಪ್ರಜಾವಾಣಿ ವಾರ್ತೆ
Published 20 ಮೇ 2023, 16:05 IST
Last Updated 20 ಮೇ 2023, 16:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಐಪಿಒ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿರ್ದಿಷ್ಟ ಕಂಪನಿಯ ಷೇರು ಮಾರುಕಟ್ಟೆಯಲ್ಲಿ ಸ್ಥಾನ ಪಡೆದುಕೊಳ್ಳಲು (ಲಿಸ್ಟಿಂಗ್‌) ಸದ್ಯ ಇರುವ ಆರು ದಿನಗಳ ಕಾಲಮಿತಿಯನ್ನು ಮೂರು ದಿನಗಳಿಗೆ ತಗ್ಗಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಉದ್ದೇಶಿಸಿದೆ.

ಕಾಲಮಿತಿಯನ್ನು ತಗ್ಗಿಸುವುದರಿಂದ ಕಂಪನಿ ಮತ್ತು ಹೂಡಿಕೆದಾರರಿಗೆ ಅನುಕೂಲ ಆಗಲಿದೆ ಎಂದು ಸೆಬಿ ತನ್ನ ಸಮಾಲೋಚನಾ ಪತ್ರದಲ್ಲಿ ತಿಳಿಸಿದೆ.

ಕಾಲಮಿತಿಯನ್ನು ಕಡಿಮೆ ಮಾಡುವ ಕುರಿತು ವಿಸ್ತೃತವಾದ ಪರೀಕ್ಷೆಯನ್ನು ನಡೆಸಿದ ಬಳಿಕ ಸೆಬಿಯು ಈ ನಿರ್ಧಾರಕ್ಕೆ ಬಂದಿದೆ. ಈ ಪ್ರಸ್ತಾವದ ಕುರಿತು ಸಾರ್ವಜನಿಕರು ತಮ್ಮ ಪ್ರತಿಕ್ರಿಯೆ ನೀಡಲು ಜೂನ್‌ 3ರವರೆಗೆ ಅವಕಾಶವನ್ನು ಸೆಬಿ ನೀಡಿದೆ.

ADVERTISEMENT

ವಂಚಕ ವಹಿವಾಟುಗಳನ್ನು ತಡೆಯಲು ಮೇಲ್ವಿಚಾರಣೆ ಮತ್ತು ಆಂತರಿಕ ನಿಯಂತ್ರಣ ವ್ಯವಸ್ಥೆಯನ್ನು ರೂಪಿಸಿಕೊಳ್ಳುವಂತೆ ಸೆಬಿಯು ಆಸ್ತಿ ನಿರ್ವಹಣಾ ಕಂಪನಿಗಳಿಗೆ ಸಲಹೆ ನೀಡಿದೆ. ಉದ್ಯೋಗಿಗಳು, ವಿತರಕರು, ದಲ್ಲಾಳಿಗಳು ಅಥವಾ ಕಂಪನಿಯೊಂದಿಗೆ ಸಂಪರ್ಕಿತ ಯಾವುದೇ ವ್ಯಕ್ತಿಗಳು ಮಾಡುವ ಸಂಭವನೀಯ ತಪ್ಪುಗಳನ್ನು ಪತ್ತೆ ಮಾಡುವ ಮತ್ತು ಅದನ್ನು ವರದಿ ಮಾಡುವ ಸಾಂಸ್ಥಿಕ ವ್ಯವಸ್ಥೆಯನ್ನು ನಿರ್ವಹಣಾ ಕಂಪನಿಗಳು ಹೊಂದುವಂತೆ ನೋಡಿಕೊಳ್ಳುವುದು ಆಯಾ ಕಂಪನಿಗಳ ಹಿರಿಯ ನಿರ್ವಾಹಕರ ಜವಾಬ್ದಾರಿಯಾಗಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.