ನವದೆಹಲಿ: ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು (ಎಸ್‌ಎಂಇ) ಸಾರ್ವಜನಿಕ ಷೇರು ಹಂಚಿಕೆಯ (ಐಪಿಒ) ಮೂಲಕ ಬಂಡವಾಳ ಸಂಗ್ರಹಿಸಲು ಇರುವ ನಿಯಮಗಳನ್ನು ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ಬಿಗಿಗೊಳಿಸಿದೆ.
ಷೇರು ಹಂಚಿಕೆ ಮಾಡಲು ಬಯಸುವ ಎಸ್‌ಎಂಇಗಳು ಲಾಭದಲ್ಲಿ ಇರಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ. ಹಾಗೆಯೇ ಸಾರ್ವಜನಿಕರಿಗೆ ಹಂಚುವ ಷೇರುಗಳ ಪ್ರಮಾಣವು ಶೇ 20ರಷ್ಟನ್ನು ಮೀರುವಂತಿಲ್ಲ ಎಂಬ ನಿಯಮವನ್ನೂ ರೂಪಿಸಿದೆ.
ಐಪಿಒ ಆರಂಭಿಸಲು ಬಯಸುವ ಎಂಎಸ್‌ಎಂಇಗಳು ಕಳೆದ ಮೂರು ವರ್ಷಗಳ ಪೈಕಿ ಎರಡು ವರ್ಷಗಳಲ್ಲಿ ಕನಿಷ್ಠ ಒಂದು ಕೋಟಿ ರೂಪಾಯಿ ಲಾಭ (ಬಡ್ಡಿ, ಸವಕಳಿ ಮತ್ತು ತೆರಿಗೆ ಪಾವತಿಗೆ ಮೊದಲು) ಗಳಿಸಿರಬೇಕು.
ಐಪಿಒದಿಂದ ಬಂದ ಮೊತ್ತವನ್ನು ಪ್ರವರ್ತಕರು, ಪ್ರವರ್ತಕ ಸಮೂಹಗಳು ಅಥವಾ ಸಂಬಂಧಪಟ್ಟವರಿಂದ ಪಡೆದ ಸಾಲ ಮರುಪಾವತಿಗೆ ಬಳಸುವಂತಿಲ್ಲ ಎಂದೂ ಹೊಸ ನಿಯಮ ಹೇಳುತ್ತದೆ.
ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶವನ್ನು ಈ ನಿಯಮಗಳು ಹೊಂದಿವೆ. ಎಂಎಸ್‌ಎಂಇಯಲ್ಲಿ ಹೂಡಿಕೆದಾರರ ಪಾಲ್ಗೊಳ್ಳುವಿಕೆ ಗಮನಾರ್ಹವಾಗಿ ಹೆಚ್ಚುವ ನಿರೀಕ್ಷೆಯನ್ನು ಹೊಸ ನಿಯಮಗಳು ಮೂಡಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.