ADVERTISEMENT

2022ರೊಳಗೆ ಸೆಮಿಕಂಡಕ್ಟರ್‌ ಕೊರತೆ ನಿವಾರಣೆ: ಮಾರುತಿ ನಿರೀಕ್ಷೆ

ಪಿಟಿಐ
Published 24 ಆಗಸ್ಟ್ 2021, 13:35 IST
Last Updated 24 ಆಗಸ್ಟ್ 2021, 13:35 IST

ನವದೆಹಲಿ: ವಾಹನೋದ್ಯಮವು ಸದ್ಯ ಎದುರಿಸುತ್ತಿರುವ ಸೆಮಿಕಂಡಕ್ಟರ್‌ ಕೊರತೆಯ ಸಮಸ್ಯೆಯು ತಾತ್ಕಾಲಿಕವಾಗಿದ್ದು, 2022ರ ಒಳಗಾಗಿ ನಿವಾರಣೆ ಆಗುವ ನಿರೀಕ್ಷೆ ಇದೆ ಎಂದು ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಅಧ್ಯಕ್ಷ ಆರ್‌.ಸಿ. ಭಾರ್ಗವ ಅವರು ಮಂಗಳವಾರ ಹೇಳಿದ್ದಾರೆ.

ಸೆಮಿಕಂಡಕ್ಟರ್‌ ಕೊರತೆಯು ಮಾರುತಿ ಸುಜುಕಿ ಇಂಡಿಯಾದ ಮೇಲೆ ಹೆಚ್ಚಿನ ಪರಿಣಾಮ ಉಂಟುಮಾಡದಿದ್ದರೂ, ವಾಹನ ತಯಾರಿಕೆಯ ಮೇಲೆ ಭಾಗಶಃ ಪರಿಣಾಮ ಬೀರಿದೆ ಎಂದು ಅವರು ತಿಳಿಸಿದ್ದಾರೆ.

ವರ್ಚುವಲ್‌ ಆಗಿ ನಡೆದ ಕಂಪನಿಯ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ವಿದ್ಯುತ್‌ ಚಾಲಿತ ವಾಹನ (ಇ.ವಿ) ವಿಭಾಗ ಪ್ರವೇಶಿಸಲು ಕಂಪನಿ ಆಲೋಚನೆ ನಡೆಸುತ್ತಿದೆ. ಕಂಪನಿಯು ನಷ್ಟವಿಲ್ಲದೆ ಕಾರ್ಯನಿರ್ವಹಿಸಲು ಸಾಧ್ಯವಾದಾಗ ಮಾತ್ರವೇ ಇ.ವಿ. ವಿಭಾಗವನ್ನು ಪ್ರವೇಶಿಸಲಾಗುವುದು’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.