ADVERTISEMENT

ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟು

ಪಿಟಿಐ
Published 15 ಜುಲೈ 2019, 17:12 IST
Last Updated 15 ಜುಲೈ 2019, 17:12 IST
   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸೋಮವಾರ ಸಕಾರಾತ್ಮಕ ವಹಿವಾಟು ನಡೆಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 160 ಅಂಶ ಹೆಚ್ಚಾಗಿ 38,896 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 35 ಅಂಶ ಹೆಚ್ಚಾಗಿ 11,588 ಅಂಶಗಳಿಗೆ ತಲುಪಿತು.

ಐ.ಟಿ, ಔಷಧ ಮತ್ತು ವಾಹನ ಷೇರುಗಳು ಗಳಿಕೆ ಕಂಡವು. ದಿನದ ವಹಿವಾಟಿನಲ್ಲಿ ಇನ್ಫೊಸಿಸ್‌ ಶೇ 7.20ರಷ್ಟು ಗರಿಷ್ಠ ಏರಿಕೆ ಕಂಡಿತು. ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಯ ಸಾಧನೆಯು ಹೂಡಿಕೆದಾರರಲ್ಲಿ ಉತ್ಸಾಹ ಮೂಡಿಸಿದೆ. ಹೀಗಾಗಿ ಷೇರುಗಳು ಗಳಿಕೆ ಕಂಡಿವೆ ಎಂದು ತಜ್ಞರು ಹೇಳಿದ್ದಾರೆ.

ADVERTISEMENT

ಮಾರುಕಟ್ಟೆ ಮೌಲ್ಯದಲ್ಲಿ ಕಂಪನಿಯ ಬಂಡವಾಳ ಮೌಲ್ಯ ₹ 17,636 ಕೋಟಿ ಹೆಚ್ಚಾಗಿ ₹ 3.34 ಲಕ್ಷ ಕೋಟಿಗೆ ತಲುಪಿತು.ಟಿಸಿಎಸ್‌ ಷೇರುಗಳುಶೇ 1.77ರಷ್ಟು ಹೆಚ್ಚಾಗಿವೆ.ಸನ್ ಫಾರ್ಮಾ, ಮಾರುತಿ, ಕೋಟಕ್‌ ಬ್ಯಾಂಕ್‌, ಬಜಾಜ್‌ ಫೈನಾನ್ಸ್‌ ಮತ್ತು ಎಚ್‌ಡಿಎಫ್‌ಸಿ ಷೇರುಗಳುಶೇ 3.61ರವರೆಗೂ ಏರಿಕೆ ಕಂಡಿವೆ.

ನಗದು ಬಿಕ್ಕಟ್ಟು ಎದುರಿಸುತ್ತಿರುವ ಡಿಎಚ್‌ಎಫ್‌ಎಲ್‌ ತ್ರೈಮಾಸಿಕದಲ್ಲಿ₹ 2,224 ಕೋಟಿ ನಷ್ಟ ಅನುಭವಿಸಿದೆ. ಹೀಗಾಗಿ ದಿನದ ವಹಿವಾಟಿನಲ್ಲಿ ಷೇರುಗಳು ಶೇ 29.15ರಷ್ಟು ಇಳಿಕೆಯಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.