ADVERTISEMENT

ಏಳು ತಿಂಗಳ ಗರಿಷ್ಠ ಮಟ್ಟಕ್ಕೆ ರೂಪಾಯಿ ಮೌಲ್ಯ ಏರಿಕೆ

ಸತತ ಆರನೇ ದಿನವೂ ಸಕಾರಾತ್ಮಕ ಚಲನೆ

ಪಿಟಿಐ
Published 18 ಮಾರ್ಚ್ 2019, 20:05 IST
Last Updated 18 ಮಾರ್ಚ್ 2019, 20:05 IST
   

ಮುಂಬೈ:ಕರೆನ್ಸಿ ವಿನಿಮಯ ಮಾರುಕಟ್ಟೆಯ ಸೋಮವಾರದ ವಹಿವಾಟಿನಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯವು 57 ಪೈಸೆ ಹೆಚ್ಚಾಗಿ ಏಳು ತಿಂಗಳ ಗರಿಷ್ಠ ಮಟ್ಟವಾದ ₹ 68.53ರಂತೆ ವಿನಿಮಯಗೊಂಡಿತು.

ಸತತ ಆರನೇ ವಹಿವಾಟು ಅವಧಿಯಲ್ಲಿಯೂ ರೂಪಾಯಿ ಬೆಲೆ ಏರಿಕೆ ಮುಂದುವರೆದಿದೆ.

ಇತರೆ ಕರೆನ್ಸಿಗಳ ಎದುರು ಡಾಲರ್‌ ಮೌಲ್ಯ ಇಳಿಕೆ, ವಿದೇಶಿ ಬಂಡವಾಳ ಒಳಹರಿವು ಹೆಚ್ಚಳ ಮತ್ತು ಸೂಚ್ಯಂಕ ಏರಿಕೆಯು ರೂಪಾಯಿ ಮೌಲ್ಯವರ್ಧನೆಗೆ ಕಾರಣವಾಗಿವೆ ಎಂದು ವರ್ತಕರು ಹೇಳಿದ್ದಾರೆ.

ADVERTISEMENT

ಷೇರುಪೇಟೆ:ಷೇರುಪೇಟೆಗಳಲ್ಲಿ ಸತತ ಆರನೇ ವಹಿವಾಟು ಅವಧಿಯಲ್ಲಿಯೂ ಸಕಾರಾತ್ಮಕ ವಹಿವಾಟು ನಡೆಯಿತು.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) 71 ಅಂಶ ಹೆಚ್ಚಾಗಿ 38,369 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಎನ್‌ಎಸ್‌ಇ ನಿಫ್ಟಿ 35 ಅಂಶ ಹೆಚ್ಚಾಗಿ 11,462 ಅಂಶಗಳಿಗೆ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.