ADVERTISEMENT

ಪೇಟೆಯಲ್ಲಿ ಮಾರಾಟದ ಒತ್ತಡ

ಜಿಡಿಪಿ ಮುನ್ನೋಟ ಇಳಿಕೆ, ಬಂಡವಾಳ ಹೊರಹರಿವಿನ ಪರಿಣಾಮ

ಪಿಟಿಐ
Published 28 ಆಗಸ್ಟ್ 2019, 17:24 IST
Last Updated 28 ಆಗಸ್ಟ್ 2019, 17:24 IST
ಕರಡಿ
ಕರಡಿ   

ಮುಂಬೈ: ಮೂರು ದಿನಗಳಿಂದ ಏರುಮುಖವಾಗಿದ್ದ ಷೇರುಪೇಟೆಗಳ ವಹಿವಾಟು ಬುಧವಾರ ಮಾರಾಟದ ಒತ್ತಡಕ್ಕೆ ಒಳಗಾಗಿ ಇಳಿಕೆ ಕಂಡಿತು.

ಲೋಹ, ಇಂಧನ, ಬ್ಯಾಂಕಿಂಗ್‌ ಮತ್ತು ವಾಹನ ವಲಯದ ಷೇರುಗಳು ಇಳಿಕೆ ಕಂಡಿವೆ.ಜನರ ಖರೀದಿ ಸಾಮರ್ಥ್ಯ ಕಡಿಮೆಯಾಗಿದೆ. ಕೈಗಾರಿಕಾ ಪ್ರಗತಿ ಮಂದಗತಿಯಲ್ಲಿದೆ. ಹೀಗಾಗಿಭಾರತದ ಜಿಡಿಪಿ ಮುನ್ನೋಟವು ಆರು ವರ್ಷಗಳ ಕನಿಷ್ಠ ಮಟ್ಟವಾದ ಶೇ 6.7ರಲ್ಲಿ ಇರಲಿದೆ ಎಂದುಇಂಡಿಯಾ ರೇಟಿಂಗ್ಸ್‌ ಸಂಸ್ಥೆಯು ಅಂದಾಜು ಮಾಡಿದೆ. ಈ ಅಂಶವೂ ಸೂಚ್ಯಂಕಗಳ ಇಳಿಮುಖ ಚಲನೆಗೆ ಕಾರಣವಾಗಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 189 ಅಂಶ ಇಳಿಕೆಯಾಗಿ 37,452 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 59 ಅಂಶ ಇಳಿಕೆಯಾಗಿ 11,046 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಗರಿಷ್ಠ ನಷ್ಟ: ದಿನದ ವಹಿವಾಟಿನಲ್ಲಿ ಯೆಸ್‌ ಬ್ಯಾಂಕ್‌ ಷೇರುಗಳು ಶೇ 7.47ರಷ್ಟು ಗರಿಷ್ಠ ನಷ್ಟ ಕಂಡಿವೆ. ಸಾಲ ಮೌಲ್ಯಮಾಪನ ಸಂಸ್ಥೆ ಮೂಡೀಸ್‌, ಬ್ಯಾಂಕ್‌ನ ಮುನ್ನೋಟ ನಕಾರಾತ್ಮಕ ಮಟ್ಟದಲ್ಲಿ ಎಂದು ಹೇಳಿರುವುದು ಈ ಕುಸಿತಕ್ಕೆ ಕಾರಣವಾಗಿದೆ.

ವೇದಾಂತ, ಟಾಟಾ ಸ್ಟೀಲ್‌, ಟಾಟಾ ಮೋಟರ್ಸ್, ಒಎನ್‌ಜಿಸಿ, ಮಹೀಂದ್ರಾ, ಮಾರುತಿ, ಎನ್‌ಟಿಪಿಸಿ ಮತ್ತು ಎಚ್‌ಯುಎಲ್‌ ಷೇರುಗಳು ಶೇ 4.06ರವರೆಗೂ ಇಳಿಕೆ ಕಂಡಿವೆ.

‘ಹೆಚ್ಚುವರಿ ಸೆಸ್‌ ಕೈಬಿಟ್ಟಿದ್ದರೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) ಜಾಗತಿಕ ವಿದ್ಯಮಾನಗಳ ಪ್ರಭಾವದಿಂದಾಗಿ ಷೇರುಗಳ ಮಾರಾಟಕ್ಕೇ ಹೆಚ್ಚು ಗಮನ ನೀಡಿದ್ದಾರೆ. ಜಿಡಿಪಿ ಪ್ರಗತಿ ದರವು ಶೇ 5.7ಕ್ಕೆ ಇಳಿಕೆಯಾಗುವ ಸಾಧ್ಯತೆಯೂ ನಕಾರಾತ್ಮಕ ಪರಿಣಾಮ ಬೀರುತ್ತಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.