ADVERTISEMENT

Gold And Silver Price: ಬೆಳ್ಳಿ ದರ ಕೆ.ಜಿಗೆ ₹3 ಸಾವಿರ ಏರಿಕೆ

ಪಿಟಿಐ
Published 6 ಜೂನ್ 2025, 14:22 IST
Last Updated 6 ಜೂನ್ 2025, 14:22 IST
   

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಶುಕ್ರವಾರ ನಡೆದ ವಹಿವಾಟಿನಲ್ಲಿ ಬೆಳ್ಳಿ ದರವು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.

ಬೆಳ್ಳಿ ದರವು ಕೆ.ಜಿಗೆ ₹3 ಸಾವಿರ ಹೆಚ್ಚಳವಾಗಿ, ₹1,07,100ದಂತೆ ಮಾರಾಟವಾಗಿದೆ. ಕಳೆದ ಡಿಸೆಂಬರ್‌ 31ರಿಂದ ಇಲ್ಲಿಯವರೆಗೆ ಬೆಳ್ಳಿ ದರವು ಕೆ.ಜಿ.ಗೆ ₹17,400 (ಶೇ 19.4) ಏರಿಕೆಯಾಗಿದೆ. 

10 ಗ್ರಾಂ ಚಿನ್ನದ ದರವು (ಶೇ 99.9 ಪರಿಶುದ್ಧತೆ) ₹99,690 ಇದೆ. ಆಭರಣ ಚಿನ್ನವು (ಶೇ 99.5 ಪರಿಶುದ್ಧತೆ) ₹99,100 ಆಗಿದೆ ಎಂದು ಅಖಿಲ ಭಾರತ ಸರಾಫ್‌ ಅಸೋಸಿಯೇಷನ್ ತಿಳಿಸಿದೆ.

ADVERTISEMENT

ದೇಶೀಯ ಮಾರುಕಟ್ಟೆಯಲ್ಲಿ ಬೆಳ್ಳಿಗೆ ಬೇಡಿಕೆ ಹೆಚ್ಚಳವಾಗಿದೆ. ಅಲ್ಲದೇ ಜಾಗತಿಕ ಮಾರುಕಟ್ಟೆಯಲ್ಲೂ ದರ ಏರಿಕೆಯಾಗಿದೆ. ಹೀಗಾಗಿ, ದೇಶದಲ್ಲಿ ಬೆಳ್ಳಿ ಬೆಲೆ ಹೆಚ್ಚಳವಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.