
ಬೆಂಗಳೂರು: ಡಿಸೆಂಬರ್ ತ್ರೈಮಾಸಿಕದಲ್ಲಿ ಸೌತ್ ಇಂಡಿಯನ್ ಬ್ಯಾಂಕ್ ₹374.32 ಕೋಟಿ ನಿವ್ವಳ ಲಾಭ ಗಳಿಸಿದೆ. ಇದು ಸೌತ್ ಇಂಡಿಯನ್ ಬ್ಯಾಂಕ್ ಇದುವರೆಗೆ ತ್ರೈಮಾಸಿಕವೊಂದರಲ್ಲಿ ಕಂಡಿರುವ ಅತ್ಯಧಿಕ ಲಾಭ.
ಬ್ಯಾಂಕ್ ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹341.87 ಕೋಟಿ ಲಾಭ ಕಂಡಿತ್ತು. ಈ ಬಾರಿ ಲಾಭವು ಶೇ 9ರಷ್ಟು ಬೆಳವಣಿಗೆ ಕಂಡಿದೆ ಎಂದು ಪ್ರಕಟಣೆ ತಿಳಿಸಿದೆ.
ಬ್ಯಾಂಕ್‌ನ ಒಟ್ಟು ವಸೂಲಾಗದ ಸಾಲ (ಎನ್‌ಪಿಎ) ವಾರ್ಷಿಕ ಆಧಾರದ ಮೇಲೆ ಶೇ 1.63ರಷ್ಟು ಇಳಿಕೆಯಾಗಿದ್ದು, ಶೇ 4.30 ಇದ್ದಿದ್ದು ಶೇ 2.67ಕ್ಕೆ ತಲುಪಿದೆ. ನಿವ್ವಳ ಎನ್‌ಪಿಎ ಶೇ 0.80ರಷ್ಟು ಕಡಿಮೆ ಆಗಿದ್ದು, ಶೇ 1.25ರ ಮಟ್ಟದಿಂದ ಶೇ 0.45ಕ್ಕೆ ಇಳಿಕೆಯಾಗಿದೆ.
ಒಟ್ಟು ಸಾಲ ನೀಡಿಕೆಯು ವಾರ್ಷಿಕ ಆಧಾರದಲ್ಲಿ ₹9,798 ಕೋಟಿ ಹೆಚ್ಚಳವಾಗಿದೆ. ಕಾರ್ಪೊರೇಟ್ ವಲಯಕ್ಕೆ ನೀಡಿರುವ ಸಾಲದ ಮೊತ್ತವು ₹34,956 ಕೋಟಿಯಿಂದ ₹38,353 ಕೋಟಿಗೆ ಏರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.