ADVERTISEMENT

ಜೂನ್‌ ಆರಂಭದಲ್ಲಿ 5ಜಿ ತರಂಗಾಂತರ ಹರಾಜು ಸಾಧ್ಯತೆ

ಪಿಟಿಐ
Published 29 ಏಪ್ರಿಲ್ 2022, 13:36 IST
Last Updated 29 ಏಪ್ರಿಲ್ 2022, 13:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರವು ಜೂನ್‌ ತಿಂಗಳ ಆರಂಭದಲ್ಲಿ 5ಜಿ ತರಂಗಾಂತರ ಹರಾಜು ಹಾಕುವ ಸಾಧ್ಯತೆ ಇದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಹರಾಜು ಸಂಬಂಧಿಸಿದಂತೆದೂರಸಂಪರ್ಕ ಇಲಾಖೆಯು ನಿರೀಕ್ಷಿತ ಕಾಲಮಿತಿಯಂತೆಯೇ ಕೆಲಸ ಮಾಡುತ್ತಿದೆ. ತರಂಗಾಂತರ ದರದ ಬಗ್ಗೆ ಉದ್ಯಮ ವಲಯ ಹೊಂದಿರುವ ಆತಂಕವನ್ನು ನಿವಾರಿಸುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಆಗಸ್ಟ್‌–ಸೆಪ್ಟೆಂಬರ್ ವೇಳೆಗೆದೇಶದಲ್ಲಿ 5ಜಿ ಸೇವೆಗಳು ಬಳಕೆಗೆ ಲಭ್ಯವಾಗಲಿವೆ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT