ಸಾಂದರ್ಭಿಕ-ಚಿತ್ರ
– ಎ.ಐ ಚಿತ್ರ
ಬೆಂಗಳೂರು: ಬಳಸಿದ ಕಾರುಗಳ ಖರೀದಿ ಮತ್ತು ಮಾರಾಟ ಕ್ಷೇತ್ರದ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ‘ಸ್ಪಿನ್ನಿ’, ರಾಜ್ಯದ 10ಕ್ಕೂ ಹೆಚ್ಚು ನಗರಗಳಿಗೆ ತನ್ನ ಸೇವೆಯನ್ನು ವಿಸ್ತರಿಸಿರುವುದಾಗಿ ತಿಳಿಸಿದೆ.
ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ತುಮಕೂರು, ಮೈಸೂರು, ಹಾಸನ, ಮಂಗಳೂರು, ಉಡುಪಿ, ಶಿವಮೊಗ್ಗ ಸೇರಿ ಒಟ್ಟು 10ಕ್ಕೂ ಹೆಚ್ಚು ನಗರಗಳಲ್ಲಿ ಕಂಪನಿಯ ಸೇವೆ ಲಭ್ಯವಿದೆ.
‘ಮಹಾನಗರದಲ್ಲಿನ ಕಾರು ಖರೀದಿದಾರರು ಮತ್ತು ಮಾರಾಟಗಾರರು ನಮ್ಮನ್ನು ಆದ್ಯತೆಯ ಕಂಪನಿಯನ್ನಾಗಿ ಪರಿಗಣಿಗಣಿಸಿದ್ದಾರೆ. ಅವರಿಗೆ ಸಿಗುವ ಸೇವೆಗಳನ್ನು ಇತರ ನಗರಗಳ ಗ್ರಾಹಕರಿಗೂ ಒದಗಿಸುವ ಉದ್ದೇಶ ಹೊಂದಿದ್ದೇವೆ’ ಎಂದು ಸ್ಪಿನ್ನಿ ಕಂಪನಿಯ ಪೂರೈಕೆ ವಿಭಾಗದ ಹಿರಿಯ ಉಪಾಧ್ಯಕ್ಷ ಗುರ್ವೀನ್ ಬೇಡಿ ಹೇಳಿದ್ದಾರೆ.
ಕಾರು ಮಾರಾಟ ಮಾಡಲು ಬಯಸುವವರು ಆನ್‌ಲೈನ್ ಮೂಲಕವೇ ತ್ವರಿತವಾಗಿ ಬೆಲೆಯ ವಿವರ ಪಡೆಯಬಹುದು. ಕಾರಿನ ತಪಾಸಣೆಯು ಕಾರು ಮಾಲೀಕರ ಮನೆಯಲ್ಲೇ ಆಗುತ್ತದೆ. ಕಾರಿಗೆ ಉತ್ತಮ ಬೆಲೆ ನಿಗದಿ ಮಾಡಿದ ಬಳಿಕ, ಅದೇ ದಿನ ಹಣ ಪಾವತಿ ಮಾಡಲಾಗುತ್ತದೆ. ಎಲ್ಲ ಕಾಗದಪತ್ರಗಳು, ಆರ್‌ಸಿ ವರ್ಗಾವಣೆ ಮತ್ತು ವಾಹನವನ್ನು ಕೊಂಡೊಯ್ಯುವ ಕೆಲಸವನ್ನು ಸ್ಪಿನ್ನಿ ಸಿಬ್ಬಂದಿ ನಿರ್ವಹಿಸುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.