ADVERTISEMENT

ಇಂದು, ನಾಳೆ ಸ್ಟಾರ್‌ಲಿಂಕ್‌ ಪರೀಕ್ಷಾರ್ಥ ಪ್ರಯೋಗ

ಪಿಟಿಐ
Published 29 ಅಕ್ಟೋಬರ್ 2025, 22:30 IST
Last Updated 29 ಅಕ್ಟೋಬರ್ 2025, 22:30 IST
   

ನವದೆಹಲಿ: ಉದ್ಯಮಿ ಇಲಾನ್‌ ಮಸ್ಕ್‌ ಒಡೆತನದ ಸ್ಟಾರ್‌ಲಿಂಕ್‌, ದೇಶದಲ್ಲಿ ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್‌ ಸೇವೆ ಆರಂಭಿಸುವುದಕ್ಕೆ ಸಂಬಂಧಿಸಿದ ಪರೀಕ್ಷಾರ್ಥ ಪ್ರಯೋಗವನ್ನು ಅಕ್ಟೋಬರ್‌ 30 ಮತ್ತು 31ರಂದು ಮುಂಬೈನಲ್ಲಿ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

ಕಾನೂನು ಜಾರಿ ಪ್ರಾಧಿಕಾರಗಳ ಸಮಕ್ಷಮದಲ್ಲಿ ಈ ಪರೀಕ್ಷಾರ್ಥ ಪ್ರಯೋಗ ನಡೆಸಲಿದೆ. ಇದು ಸ್ಟಾರ್‌ಲಿಂಕ್‌ಗೆ ಹಂಚಿಕೆ ಮಾಡಿರುವ ತಾತ್ಕಾಲಿಕ ತರಂಗಾತರವನ್ನು ಆಧರಿಸಿದೆ ಎಂದು ತಿಳಿಸಿವೆ.

ಸ್ಟಾರ್‌ಲಿಂಕ್‌ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್‌ನೆಟ್‌ ಸೇವೆ ಆರಂಭಿಸಲು ಈ ಪರೀಕ್ಷಾರ್ಥ ಪ್ರಯೋಗ ಕಡ್ಡಾಯವಾಗಿದೆ. ಸ್ಟಾರ್‌ಲಿಂಕ್ ತನ್ನ ವಾಣಿಜ್ಯ ಸೇವೆ ಆರಂಭಿಸುವುದಕ್ಕೂ ಮುನ್ನ ಅನುಮತಿ ಪಡೆಯವುದು ಅತ್ಯವಶ್ಯಕವಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.