ADVERTISEMENT

ಸ್ಟಾರ್ಟ್‌ಅಪ್‌: ಮಹಿಳೆಯರಿಗೆಬ್ರಿಟಾನಿಯಾ ನೆರವಿನ ಹಸ್ತ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2019, 19:05 IST
Last Updated 12 ಮಾರ್ಚ್ 2019, 19:05 IST
ಬ್ರಿಟಾನಿಯಾ ಸ್ಟಾರ್ಟ್‌ಅಪ್‌ ಅಭಿಯಾನದ ಬಹುಮಾನ ವಿಜೇತ ಮಹಿಳಾ ನವೋದ್ಯಮಿಗಳು
ಬ್ರಿಟಾನಿಯಾ ಸ್ಟಾರ್ಟ್‌ಅಪ್‌ ಅಭಿಯಾನದ ಬಹುಮಾನ ವಿಜೇತ ಮಹಿಳಾ ನವೋದ್ಯಮಿಗಳು   

ಬೆಂಗಳೂರು: ಉದ್ಯಮಶೀಲತೆ ಪ್ರೋತ್ಸಾಹಿಸಲು ಬ್ರಿಟಾನಿಯ ಮಾರಿ ಗೋಲ್ಡ್ ಕಂಪನಿಯು ಹತ್ತು ಮಹಿಳೆಯರನ್ನು ಗುರುತಿಸಿ ಅವರಿಗೆ ತಲಾ ₹ 10 ಲಕ್ಷ ನೀಡಿದೆ.

‘ಬ್ರಿಟಾನಿಯ ಮಾರಿ ಗೋಲ್ಡ್ ಮೈ ಸ್ಟಾರ್ಟ್‌ಅಪ್ ಅಭಿಯಾನ’ದಲ್ಲಿ ಆಯ್ಕೆಯಾದವರಿಗೆ ಈ ಬಹುಮಾನದ ಮೊತ್ತ ನೀಡಲಾಗಿದೆ.

ಗೃಹಿಣಿಯರಿಗೆ ಉದ್ಯಮಶೀಲತೆ ಕಲ್ಪಿಸಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಆರಂಭಿಸಿದ್ದ ಸ್ಟಾರ್ಟ್‌ಅಪ್ ಅಭಿಯಾನಕ್ಕೆ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ 42 ಮಹಿಳೆಯರಲ್ಲಿ 10 ಮಂದಿಯನ್ನು ಆಯ್ಕೆ ಮಾಡಲಾಗಿದೆ.

ADVERTISEMENT

‘ಬ್ರಿಟಾನಿಯ ಮಾರಿ ಗೋಲ್ಡ್ ಕಂಪನಿಯು ಇದೇ ಮೊದಲ ಬಾರಿಗೆ ಇಂತಹ ಅಭಿಯಾನ ನಡೆಸಿದೆ. ಗೃಹಿಣಿಯರ ಸಬಲೀಕರಣವೇ ಇದರ ಮುಖ್ಯ ಉದ್ದೇಶವಾಗಿತ್ತು’ ಎಂದು ಬ್ರಿಟಾನಿಯ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿ ಉಪಾಧ್ಯಕ್ಷ ಅಲಿ ಹ್ಯಾರಿಸ್ ಶೇರೆ ಹೇಳಿದ್ದಾರೆ.

ನಗದು ಬಹುಮಾನ ಪಡೆದವರಲ್ಲಿ ಬೆಂಗಳೂರಿನ ಸ್ನೇಹಾ ಕುಮಂದುರಿ (37) ಕೂಡ ಒಬ್ಬರಾಗಿದ್ದಾರೆ. ಸಾವಯವ ಪದಾರ್ಥ ಬಳಸಿ ಕರಕುಶಲ ಉತ್ಪನ್ನಗಳ ತಯಾರಿಸುವುದು, ಮಹಿಳೆಯರಿಗೆ ಉದ್ಯೋಗ ಅವಕಾಶ ಕಲ್ಪಿಸುವುದು ಅವರ ಉದ್ದೇಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.