ADVERTISEMENT

ಸೆನ್ಸೆಕ್ಸ್‌ 496 ಅಂಶ ಏರಿಕೆ

ಪಿಟಿಐ
Published 19 ಜನವರಿ 2024, 16:06 IST
Last Updated 19 ಜನವರಿ 2024, 16:06 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ (ಪಿಟಿಐ): ಸತತ ಮೂರು ದಿನಗಳಿಂದ ಇಳಿಕೆ ಕಂಡಿದ್ದ ಷೇರುಪೇಟೆಯು ಶುಕ್ರವಾರ ಚೇತರಿಕೆ ಕಂಡಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 496 ಅಂಶ ಏರಿಕೆಯಾಗಿ 71,683ಕ್ಕೆ ಸ್ಥಿರಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 160 ಅಂಶ ಹೆಚ್ಚಾಗಿ 21,622 ವಹಿವಾಟನ್ನು ಮುಕ್ತಾಯಗೊಳಿಸಿತು.

ಭಾರ್ತಿ ಏರ್‌ಟೆಲ್‌, ಎನ್‌ಟಿಪಿಸಿ, ಟೆಕ್‌ ಮಹೀಂದ್ರ, ಮಹೀಂದ್ರ ಆ್ಯಂಡ್‌ ಮಹೀಂದ್ರ, ಟಾಟಾ ಸ್ಟೀಲ್‌, ಅಲ್ಟ್ರಾಟೆಕ್‌ ಸಿಮೆಂಟ್‌, ಟೈಟನ್‌, ಆಕ್ಸಿಸ್ ಬ್ಯಾಂಕ್‌, ಜೆಎಸ್‌ಡಬ್ಯ್ಲು ಸ್ಟೀಲ್‌ ಮತ್ತು ಲಾರ್ಸೆನ್‌ ಆ್ಯಂಡ್‌ ಟೊರ್ಬೊ ಲಾಭ ಕಂಡಿವೆ.

ADVERTISEMENT

ಇಂಡಸ್‌ಇಂಡ್‌ ಬ್ಯಾಂಕ್‌, ಕೋಟಕ್‌ ಮಹೀಂದ್ರ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ ನಷ್ಟ ಕಂಡಿವೆ.

ಕಳೆದ ಮೂರು ದಿನದ ವಹಿವಾಟಿನಲ್ಲಿ ಬಿಎಸ್‌ಇ ಮತ್ತು ನಿಫ್ಟಿ ಸೂಚ್ಯಂಕಗಳು ಕ್ರಮವಾಗಿ ಶೇ 2.91 ಮತ್ತು ಶೇ 2.87 ಇಳಿಕೆ ಆಗಿದ್ದವು.

ಜ. 22ರಂದು ಅರ್ಧದಿನ ರಜೆ:

ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಜನವರಿ 22ರಂದು ಷೇರುಪೇಟೆಯು ಬೆಳಿಗ್ಗೆ 9ಗಂಟೆಗೆ ಬದಲು ಮಧ್ಯಾಹ್ನ 2.30ಕ್ಕೆ ಆರಂಭವಾಗಿ, ಸಂಜೆ 5 ಗಂಟೆವರೆಗೆ ವಹಿವಾಟು ನಡೆಸಲಿದೆ ಎಂದು ಆರ್‌ಬಿಐ ಸುತ್ತೋಲೆಯಲ್ಲಿ ತಿಳಿಸಿದೆ. 

- ಎಚ್‌ಡಿಎಫ್‌ಸಿ ಷೇರು ಶೇ 12ರಷ್ಟು ಕುಸಿತ

ಹೂಡಿಕೆದಾರರು ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರುಗಳ ಮಾರಾಟಕ್ಕೆ ಪೈಪೋಟಿಗೆ ಬಿದ್ದಿದ್ದಾರೆ. ಹಾಗಾಗಿ ಮೂರು ದಿನಗಳಲ್ಲಿ ಕಂಪನಿಯು ಶೇ 12.40ರಷ್ಟು ನಷ್ಟ ದಾಖಲಿಸಿದೆ. ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯ ಒಟ್ಟು ₹1.58 ಲಕ್ಷ ಕೋಟಿ ಕರಗಿದೆ. ಬಿಎಸ್‌ಇಯಲ್ಲಿ ಕಂಪನಿಯ ಷೇರಿನ ಬೆಲೆ ₹1470 ಮತ್ತು ನಿಫ್ಟಿಯಲ್ಲಿ ₹1470 ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.