ADVERTISEMENT

ಸಕ್ಕರೆ ಉತ್ಪಾದನೆ ಶೇ 6ರಷ್ಟು ಹೆಚ್ಚಳ

ಪಿಟಿಐ
Published 17 ಫೆಬ್ರುವರಿ 2022, 16:50 IST
Last Updated 17 ಫೆಬ್ರುವರಿ 2022, 16:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ಸಕ್ಕರೆ ಉತ್ಪಾದನೆಯು 2021–22ರ ಮಾರುಕಟ್ಟೆ ವರ್ಷದ ಅಕ್ಟೋಬರ್‌ 1ರಿಂದ ಫೆಬ್ರುವರಿ 15ರ ಅವಧಿಯಲ್ಲಿ 220.91 ಲಕ್ಷ ಟನ್‌ ಆಗಿದೆ.

ಹಿಂದಿನ ಮಾರುಕಟ್ಟೆ ವರ್ಷದ ಇದೇ ಅವಧಿಯಲ್ಲಿ 209.11 ಲಕ್ಷ ಟನ್‌ ಸಕ್ಕರೆ ಉತ್ಪಾದನೆ ಆಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಶೇ 6ರಷ್ಟು ಹೆಚ್ಚಳ ಆಗಿದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಒಕ್ಕೂಟ (ಐಎಸ್‌ಎಂಎ) ಗುರುವಾರ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಸಕ್ಕರೆ ಉತ್ಪಾದನೆಯು 75.46 ಲಕ್ಷ ಟನ್‌ನಿಂದ 86.15 ಲಕ್ಷ ಟನ್‌ಗೆ ಏರಿಕೆ ಆಗಿದೆ. ಕರ್ನಾಟಕದಲ್ಲಿ 39.07 ಲಕ್ಷ ಟನ್‌ನಿಂದ 44.85 ಲಕ್ಷ ಟನ್‌ಗೆ ಏರಿಕೆ ಕಂಡಿದೆ. ಆದರೆ, ಉತ್ತರ ಪ್ರದೇಶದಲ್ಲಿ 65.13 ಲಕ್ಷ ಟನ್‌ನಿಂದ 59.32 ಲಕ್ಷ ಟನ್‌ಗೆ ಇಳಿಕೆ ಆಗಿದೆ. ಜನವರಿವರೆಗಿನ ಮಾಹಿತಿಯ ಪ್ರಕಾರ, ಸಕ್ಕರೆ ರಫ್ತು ಮೂರು ಪಟ್ಟು (35.1 ಲಕ್ಷ ಟನ್‌ಗೆ) ಹೆಚ್ಚಳ ಕಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.